ಯೂತ್ ಒಲಿಂಪಿಕ್ಸ್‌: ಲಕ್ಷ್ಯ ಸೇನ್ ಗೆ ಬೆಳ್ಳಿ

Update: 2018-10-13 19:07 GMT

ಬ್ಯುನಸ್ ಐರಿಸ್, ಅ.13: ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಲಕ್ಷ ಸೇನ್ ಯೂತ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದಾರೆ. ಫೈನಲ್‌ನಲ್ಲಿ ಸೇನ್ ಅವರು ಚೀನಾದ ಲಿ ಶಿಫೆಂಗ್ ವಿರುದ್ಧ 15-21, 19-21 ಅಂತರದಲ್ಲಿ ಸೋತು ಬೆಳ್ಳಿ ಪಡೆದರು.42 ನಿಮಿಷಗಳಲ್ಲಿ ಫೈನಲ್ ಪಂದ್ಯ ಮುಕ್ತಾಯಗೊಂಡಿತು.

ಸೆಮಿಫೈನಲ್ ಪಂದ್ಯದಲ್ಲಿ ಸೇನ್ ಅವರು ಜಪಾನ್‌ನ ಕೊಡಾಯ್ ನಾರಾವೊಕಾ ವಿರುದ್ಧ 14-21, 21-15, 24-22 ಅಂತರದಲ್ಲಿ ಜಯ ಗಳಿಸಿ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದ್ದರು. ಸೇನ್ ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ 2010ರಲ್ಲಿ ಸಿಂಗಾಪುರದಲ್ಲಿ ನಡೆದ ಮೊದಲ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರಣಯ್ ಕುಮಾರ್ ಬೆಳ್ಳಿ ಗೆದ್ದುಕೊಂಡಿದ್ದರು.

ವನಿತೆಯರ ತಂಡ ಸೆಮಿಗೆ

ಭಾರತದ ವನಿತೆಯರ ತಂಡ ಯೂತ್ ಒಲಿಂಪಿಕ್ಸ್ ನ ಹಾಕಿ ಪಂದ್ಯದಲ್ಲಿ ಪೊಲೆಂಡ್‌ನ್ನು 3-0 ಅಂತರದಲ್ಲಿ ಬಗ್ಗು ಬಡಿದು ಸೆಮಿಫೈನಲ್ ಪ್ರವೇಶಿಸಿದೆ.

ಭಾರತದ ಲಾಲ್ರೆಮ್ಸಿಯಾಮಿ (10ನೇ ನಿ.), ನಾಯಕಿ ಸಲೀಮಾ ಟೇಟಾ(14ನೇ ನಿಮಿಷ) ಮತ್ತು ಬಲ್ಜಿತ್ ಕೌರ್(14ನೇ ನಿ.) ಗೋಲು ಜಮೆ ಮಾಡಿ ಭಾರತದ ಗೆಲುವಿಗೆ ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News