ಲಿಯಂಡರ್ ಪೇಸ್ ಮುಡಿಗೆ ಮಿಲೆಕ್ಸ್ ಓಪನ್ ಕಿರೀಟ

Update: 2018-10-14 04:08 GMT

ಹೊಸದಿಲ್ಲಿ, ಅ. 14: ಭಾರತದ ಖ್ಯಾತ ಟೆನಿಸ್ ಪಟು ಲಿಯಂಡರ್ ಪೇಸ್ 2018ರಲ್ಲಿ ತಮ್ಮ ಎರಡನೇ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಿಲಿಕ್ಸ್ ಓಪನ್ ಟೂರ್ನಿಯ ಡಬಲ್ಸ್‌ನಲ್ಲಿ ಮೆಕ್ಸಿಕನ್ ಆಟಗಾರ ರೆಯೆಸ್ ವರೇಲಾ ಜತೆ ಸೇರಿ ಪ್ರಶಸ್ತಿ ಗೆದ್ದರು.

ಫೈನಲ್‌ನಲ್ಲಿ ಪೇಸ್- ರೆಯೆಸ್ ಜೋಡಿ, ಉರುಗ್ವೆ- ಈಕ್ವೆಡಾರ್‌ನ ಏರಿಯಲ್ ಬೆಹರ್- ರೊಬೆರ್ಟೊ ಕ್ವಿರೋಝ್ ಜೋಡಿಯನ್ನು ಕಠಿಣ ಹೋರಾಟದಲ್ಲಿ ಸೋಲಿಸಿತು. ಅಂತಿಮವಾಗಿ ಪೇಸ್ ಜೋಡಿ 6-4, 3-6, 12-10 ಅಂತರದಿಂದ ಜಯ ಸಾಧಿಸಿತು. ಈ ಜಯದೊಂದಿಗೆ ಪೇಸ್ 26ನೇ ಚಾಲೆಂಜರ್ ಹಂತದ ಡಬಲ್ಸ್ ಪ್ರಶಸ್ತಿ ಗೆದ್ದಂತಾಗಿದೆ. ತಮ್ಮ ವೃತ್ತಿಜೀವನದಲ್ಲಿ ಪೇಸ್ 54 ಎಟಿಪಿ ಡಬಲ್ಸ್ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ.

ಈ ವರ್ಷದ ಎಟಿಪಿ ವರ್ಲ್ಡ್ ಟೂರ್‌ನ ದುಬೈ ಟೆನಿಸ್ ಚಾಂಪಿಯನ್‌ಶಿಪ್ ಹಾಗೂ ವಿನ್‌ಸ್ಟನ್-ಸಲೇಮ್ ಟೂರ್ನಿಯಲ್ಲಿ ಫೈನಲ್ ತಲುಪಿ ರನ್ನರ್ ಅಪ್ ಆಗಿದ್ದರು.
ಹಲವು ಬಾರಿ ಗ್ರಾಂಡ್‌ಸ್ಲಾಂ ಡಬಲ್ಸ್ ಪ್ರಶಸ್ತಿಯನ್ನೂ ಗೆದ್ದಿರುವ ಪೇಸ್, ಡೇವಿಸ್ ಕಪ್ ಇತಿಹಾಸದಲ್ಲೇ ಗರಿಷ್ಠ ಡಬಲ್ಸ್ ಗೆದ್ದ ದಾಖಲೆ ಹೊಂದಿದ್ದಾರೆ. ರೋಹನ್ ಬೋಪಣ್ಣ ಜತೆ ಸೇರಿ ಅವರು 43 ಡಬಲ್ಸ್ ಪಂದ್ಯ ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News