ಕೇಂದ್ರ ಸಚಿವ ಎಂ.ಜೆ. ಅಕ್ಬರ್ ರಾಜೀನಾಮೆ?

Update: 2018-10-14 14:34 GMT

ಹೊಸದಿಲ್ಲಿ, ಅ.14: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಕೇಂದ್ರ ವಿದೇಶಾಂಗ ರಾಜ್ಯ ಸಚಿವ ಹಾಗೂ ಮಾಜಿ ಸಂಪಾದಕ ಎಂಜೆ ಅಕ್ಬರ್ ಇಂದು ರಾಜೀನಾಮೆ ನೀಡಿದ್ದಾರೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಸರಕಾರವಾಗಲೀ, ಎಂ.ಜೆ. ಅಕ್ಬರ್ ಅವರಾಗಲೀ ಯಾವುದೇ ಹೇಳಿಕೆ ನೀಡಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ‘ಮಿ ಟೂ ಅಭಿಯಾನ’ದ ಮೂಲಕ ಅಕ್ಬರ್ ವಿರುದ್ಧ ಪತ್ರಿಕೆಯಲ್ಲಿ ಅವರೊಂದಿಗೆ ಕೆಲಸ ಮಾಡಿದ್ದ ಹಲವು ಮಹಿಳಾ ಸಹೋದ್ಯೋಗಿಗಳು ಲೈಂಗಿಕ ಆರೋಪ ಹೊರಿಸಿದ್ದರು.

ವಿದೇಶ ಪ್ರವಾಸ ಮುಗಿಸಿ ರವಿವಾರ ಭಾರತಕ್ಕೆ ವಾಪಸಾದ ಅಕ್ಬರ್ ಅವರಿಗೆ ಏರ್‌ಪೋರ್ಟ್‌ನಲ್ಲಿ ಮಾಧ್ಯಮಗಳು ಸುತ್ತುವರಿದು ಪ್ರಶ್ನೆಗಳ ಸುರಿಮಳೆಗೈದವು. ಎಲ್ಲ ಪ್ರಶ್ನೆಗೆ ಬಳಿಕ ಉತ್ತರ ನೀಡುವೆ ಎಂದು ಹೇಳಿದ್ದರು.

ಏಷಿಯನ್ ಏಜ್, ದಿ ಟೆಲಿಗ್ರಾಫ್‌ನಂತಹ ಪ್ರಮುಖ ದಿನಪತ್ರಿಕೆಗಳ ಮುಖ್ಯಸ್ಥರಾಗಿದ್ದ ಅಕ್ಬರ್ ಅವರ ವಿರುದ್ಧ ಯುವತಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಉದ್ಯೋಗ ಸಂದರ್ಶನಕ್ಕಾಗಿ ನಮ್ಮನ್ನು ಹೊಟೇಲ್‌ನ ಕೊಠಡಿಗೆ ಅಕ್ಬರ್ ಅವರು ಬರ ಮಾಡಿಕೊಂಡಿದ್ದಾರೆ ಎಂದು ಕೆಲವು ಯುವತಿಯರು ಆರೋಪಿಸಿದ್ದಾರೆ. ಅವರು ತಮ್ಮ ಕಚೇರಿಯ ಮುಚ್ಚಿದ ಕೊಠಡಿಯಲ್ಲಿ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಇನ್ನು ಕೆಲವು ಯುವತಿಯರು ಆರೋಪಿಸಿದ್ದಾರೆ.

ವರ್ಷಗಳ ಹಿಂದೆ ತಾನು ಮ್ಯಾಗಝಿನ್ ಲೇಖನವೊಂದರ ಘಟನೆಯಲ್ಲಿ ಹೆಸರಿಸಿದ ವ್ಯಕ್ತಿ ಅಕ್ಬರ್ ಎಂದು ಪತ್ರಕರ್ತೆ ಪ್ರಿಯಾ ರಮಣಿ ಅಕ್ಟೋಬರ್ 8ರಂದು ಟ್ವೀಟ್ ಮಾಡಿದ ಬಳಿಕ ಅಕ್ಬರ್ ವಿರುದ್ಧ ಇನ್ನಷ್ಟು ಲೈಂಗಿಕ ಕಿರುಕುಳದ ಆರೋಪಗಳು ಕೇಳಿ ಬಂದವು.

ಪ್ರಿಯಾ ರಮಣಿ ಅಲ್ಲದೆ, ಪ್ರೇರಣಾ ಸಿಂಗ್ ಬಿಂದ್ರಾ, ಘಝಲಾ ವಹಾಬ್, ಶುತಪಾ ಪೌಲ್, ಅಂಜು ಭಾರತಿ, ಸುಪರ್ಣಾ ಶರ್ಮಾ, ಶುಮಾ ರಹಾ, ಮಾಲಿನಿ ಭೂಪ್ತಾ, ಕಾನಿಕಾ ಗೆಹ್ಲೋಟ್, ಕಾದಂಬರಿ ಎಂ. ವಾಡೆ, ಮಜ್ಲಿ ದೆ ಪುಯ ಕಂಪ್ ಹಾಗೂ ರುಥ್ ಡೇವಿಡ್ ಕೂಡ ಎಂ.ಜೆ. ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಪ್ರಿಯಾ ರಮಣಿ ಅವರು ವರ್ಷಗಳ ಹಿಂದೆ ಮ್ಯಾಗಝಿನ್ ಲೇಖನದಲ್ಲಿ ಈ ಅಭಿಯಾನ ಆರಂಭಿಸಿದರು. ಇದು ಕಟ್ಟು ಕತೆ ಆಗಿರುವುದರಿಂದ ಅವರು ನನ್ನ ಹೆಸರನ್ನು ಉಲ್ಲೇಖಿಸಿಲ್ಲ. ನನ್ನ ಹೆಸರನ್ನು ಯಾಕೆ ಉಲ್ಲೇಖಿಸಿಲ್ಲ ಎಂದು ಇತ್ತೀಚೆಗೆ ಪ್ರಶ್ನಿಸಿದಾಗ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು, ಅವರ ಏನನ್ನೂ ಮಾಡಿಲ್ಲ. ಆದುದರಿಂದ ಅವರ ಹೆಸರು ಉಲ್ಲೇಖಿಸಿಲ್ಲ ಎಂದಿದ್ದರು. ನಾನು ಏನನ್ನೂ ಮಾಡದೇ ಇದ್ದರೆ, ಅದು ಎಂತಹ ವರದಿ ಎಂದು ಅಕ್ಬರ್ ಪ್ರಶ್ನಿಸಿದ್ದಾರೆ.

‘‘ಆ ವ್ಯಕ್ತಿ ಎಂದಿಗೂ ನನ್ನ ಮೇಲೆ ಕೈ ಹಾಕಿಲ್ಲ’’ ಎಂದು ಶುತಾಪ ಪೌಲ್ ಹೇಳಿದ್ದಾರೆ. ‘‘ಅವರು ನಿಜವಾಗಿ ಏನನ್ನೂ ಮಾಡಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ’’ ಎಂದು ಶುಮಾ ರಹಾ ಹೇಳಿದ್ದಾರೆ. ಅವರು ಸ್ವಿಮ್ಮಿಗ್ ಫೂಲ್‌ನಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಈಜಲು ತಿಳಿದಿರಲಿಲ್ಲ ಎಂದು ಅಂಜು ಭಾರತಿ ಅಸಂಗತವಾಗಿ ಹೇಳಿದ್ದಾರೆ ಎಂದು ಅಕ್ಬರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News