ಯೂತ್ ಒಲಿಂಪಿಕ್ಸ್: ಭಾರತದ ಪುರುಷರ ಹಾಕಿ ತಂಡಕ್ಕೆ ಬೆಳ್ಳಿ

Update: 2018-10-15 05:51 GMT

ಬ್ಯುನಸ್ ಐರಿಸ್, ಅ.15: ಮೂರನೇ ಆವೃತ್ತಿಯ ಒಲಿಂಪಿಕ್ ಗೇಮ್ಸ್‌ನ ಫೈನಲ್‌ನಲ್ಲಿ ಸೋತಿರುವ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಇಲ್ಲಿ ರವಿವಾರ ನಡೆದ ಪದಕ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಮಲೇಶ್ಯಾ ವಿರುದ್ಧ 2-4 ಗೋಲುಗಳ ಅಂತರದಿಂದ ಸೋಲುಂಡಿತು.

 ನಾಯಕ ವಿವೇಕ್ ಸಾಗರ್ ಪ್ರಸಾದ್ ಅವಳಿ ಗೋಲು ಬಾರಿಸಿದರೂ ತಂಡದ ಗೆಲುವಿಗೆ ಇದು ಸಾಕಾಗಲಿಲ್ಲ. ಭಾರತ ಮೂರನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿತು. ಆದರೆ, ಭಾರತದ ಸಂಭ್ರಮ ಹೆಚ್ಚುಹೊತ್ತು ನಿಲ್ಲಲಿಲ್ಲ. ಮಲೇಶ್ಯಾ ಆಟಗಾರರು 5ನೇ ನಿಮಿಷದಲ್ಲಿ ಗೋಲು ಬಾರಿಸಿ ಸಮಬಲ ಸಾಧಿಸಿದರು.

6ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ವಿವೇಕ್ ತಂಡಕ್ಕೆ ಮತ್ತೊಮ್ಮೆ ಮುನ್ನಡೆ ಒದಗಿಸಿಕೊಟ್ಟರು.

ಆದರೆ, ದ್ವಿತೀಯಾರ್ಧದಲ್ಲಿ ಪಂದ್ಯದ ಚಿತ್ರಣ ಸಂಪೂರ್ಣ ಬದಲಾಯಿತು. ಅಖಿಮುಲ್ಲಾ ಅನ್ವರ್(14ನೇ,19ನೇ ನಿಮಿಷ) ಅವಳಿ ಗೋಲು ಬಾರಿಸಿದರೆ, ಅಮ್ರುಲ್ ಅಝರ್ 17ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಮಲೇಶ್ಯಾಕ್ಕೆ 4-2 ಅಂತರದ ಗೆಲುವು ತಂದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News