ಶಬರಿಮಲೆಗೆ ತೆರಳುವ ಎಲ್ಲರಿಗೂ ಸರಕಾರ ರಕ್ಷಣೆ ನೀಡಲಿದೆ: ಸಚಿವ ಇ.ಪಿ. ಜಯರಾಜನ್

Update: 2018-10-15 10:42 GMT

ತಿರುವನಂತಪುರಂ, ಅ.15: ಶಬರಿಮಲೆಗೆ ತೆರಳುವ ಎಲ್ಲರಿಗೂ ಸರಕಾರ ರಕ್ಷಣೆ ನೀಡಲಿದೆ ಎಂದು ಸಚಿವ ಇ.ಪಿ. ಜಯರಾಜನ್ ಹೇಳಿದ್ದಾರೆ. ಕೋರ್ಟಿನ ತೀರ್ಪನ್ನು ನಿರಾಕರಿಸಲು ಸರಕಾರಕ್ಕೆ ಸಾಧ್ಯವಿಲ್ಲ. ಮಹಿಳಾ ಪ್ರವೇಶವನ್ನು ವಿರೋಧಿಸುವ ಸಂಘಟನೆಗಳೊಂದಿಗೆ ಚರ್ಚೆಗೆ ಸರಕಾರ ಇನ್ನೂ ಸಿದ್ಧವಿದೆ ಎಂದು ಅವರು ತಿಳಿಸಿದರು.

ಶಬರಿಮಲೆ ಮಹಿಳಾ ಪ್ರವೇಶದ ವಿರುದ್ಧ ಪ್ರತಿಭಟನೆ ಹಿನ್ನೆಲೆಯಲ್ಲಿ ಸಚಿವರಿಂದ ಈ ಪ್ರತಿಕ್ರಿಯೆ ಬಂದಿದೆ. ತಿರುವಾಂಕೂರ್ ದೇವಸ್ವಂ ಬೋರ್ಡ್ ಆಗಸ್ಟ್ 16ಕ್ಕೆ ಸಂಘಟನೆಗಳನ್ನು ಚರ್ಚೆಗೆ ಕರೆದಿದೆ. ತಂತ್ರಿ ಸಮಾಜಂ, ಪಂದಳಂ ಅರಮನೆಯ ಪ್ರತಿನಿಧಿಗಳು, ಅಯ್ಯಪ್ಪ ಸೇವಾ ಸಂಘ, ಅಯ್ಯಪ್ಪ ಸೇವಾ ಸಮಾಜ, ಶಬರಿಮಲೆ ತಂತ್ರಿಗಳು, ತಾಯಮಣ್ ಕುಟುಂಬ, ಯೋಗಕ್ಷೇಮ ಸಭಾ ಸಂಘಟನೆಗಳನ್ನು ಚರ್ಚೆಗೆ ಆಮಂತ್ರಿಸಲಾಗಿದೆ. ದೇವಸ್ವಂ ಮಂಡಳಿ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದು ಜಯರಾಜನ್ ಹೇಳಿದರು.

ಚರ್ಚೆಯಲ್ಲಿ ಪಾಲ್ಗೊಳ್ಳುವುದಾಗಿ ಶಬರಿಮಲೆ ತಂತ್ರಿ ಕಂಠೀರರ್ ರಾಜೀವರ್ ತಿಳಿಸಿದ್ದಾರೆ. ಅವರು ತನ್ನ ನಿರ್ಧಾರದಲ್ಲಿ ಯಾವುದೇ ಬಲಾವಣೆಯಿಲ್ಲ ಎಂದಿದ್ದಾರೆ. ಪಂದಳಂ ಅರಮನೆಯವರು ಇಂದು ತಮ್ಮ ತೀರ್ಮಾನ ತಿಳಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News