ಯೂತ್ ಒಲಿಂಪಿಕ್ಸ್: ಸೂರಜ್ ಪನ್ವಾರ್‌ಗೆ ಬೆಳ್ಳಿ

Update: 2018-10-16 06:21 GMT

ಬ್ಯುನಸ್‌ಐರಿಸ್(ಅರ್ಜೆಂಟೀನ), ಅ.16: ಮೂರನೇ ಆವೃತ್ತಿಯ ಯೂತ್ ಒಲಿಂಪಿಕ್ ಗೇಮ್ಸ್‌ನಲ್ಲಿ ಸೂರಜ್ ಪನ್ವಾರ್ ಅಥ್ಲೆಟಿಕ್ಸ್‌ನಲ್ಲಿ ಮೊದಲ ಪದಕವನ್ನು ಗೆದ್ದುಕೊಂಡಿದ್ದಾರೆ.

5,000 ಮೀ. ರೇಸ್‌ವಾಕ್‌ನ ಎರಡು ಹಂತದಲ್ಲಿ ಸೂರಜ್ 20.35.87 ಸೆಕೆಂಡ್ ಹಾಗೂ 20.23.30 ಸೆಕೆಂಡ್‌ನಲ್ಲಿ ಗುರಿ ತಲುಪಿದರು.

ಸೂರಜ್ ಮೊದಲ ಹಂತದಲ್ಲಿ ಎರಡನೇ ಸ್ಥಾನ ಪಡೆದರು. ಎರಡನೇ ಹಂತದಲ್ಲೂ ದ್ವಿತೀಯ ಸ್ಥಾನ ಪಡೆದರು. ಒಟ್ಟು 40.59.17 ಸೆಕೆಂಡ್ ಸಮಯದಲ್ಲಿ ಗುರಿ ತಲುಪಿದ ಸೂರಜ್ ಚಿನ್ನದ ಪದಕ ಜಯಿಸಿದ ಈಕ್ವೆಡಾರ್‌ನ ಆಸ್ಕರ್ ಪಾಟಿನ್(40:51.86)ಗಿಂತ ಏಳು ನಿಮಿಷ ಹಿಂದುಳಿದರು. ಇದೇ ವೇಳೆ ಪುರ್ಟೊ ರಿಕೊದ ಜಾನ್ ಮೊರೆವು 3ನೇ ಸ್ಥಾನ ಪಡೆದು ಕಂಚು ಜಯಿಸಿದರು.

‘‘ಒಲಿಂಪಿಕ್ಸ್, ಏಶ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ಗೆ ತರಬೇತಿ ನಡೆಸಿ ಪದಕವನ್ನು ಜಯಿಸುವುದು ನನ್ನ ಮುಂದಿನ ಗುರಿ’’ ಎಂದು ಸೂರಜ್ ಐಎಎಎಫ್‌ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News