ಪತ್ರಕರ್ತ ಖಶೋಗಿ ಹತ್ಯೆ ನಡೆದಿದೆ ಎಂದು ಒಪ್ಪಿಕೊಳ್ಳಲಿರುವ ಸೌದಿ ಅರೇಬಿಯಾ?

Update: 2018-10-16 09:18 GMT

ವಾಷಿಂಗ್ಟನ್, ಅ.16: ತಪ್ಪಾಗಿ ಹೋದ ವಿಚಾರಣೆಯೊಂದು ಸೌದಿ ಪತ್ರಕರ್ತ ಜಮಾಲ್ ಖಶೋಗಿ ಅವರ ಸಾವಿಗೆ ಕಾರಣವಾಯಿತು ಎಂಬ ವರದಿಯನ್ನು ಸೌದಿ ಅರೇಬಿಯಾ ಸಿದ್ಧಪಡಿಸುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ.

ಈ ವರದಿಯಲ್ಲಿ ಬದಲಾವಣೆಗಳೂ ಆಗಬಹುದು ಎಂದು ಇನ್ನೊಂದು ವರದಿ ತಿಳಿಸಿದೆ. ಈ ಕಾರ್ಯಾಚರಣೆ  ಯಾವುದೇ ಅನುಮತಿಯಿಲ್ಲದೇ ನಡೆದಿತ್ತು ಹಾಗೂ ಅದರಲ್ಲಿ ಶಾಮೀಲಾದವರನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದು ಇನ್ನೊಂದು ಸುದ್ದಿ ಸಂಸ್ಥೆ ತಿಳಿಸಿರುವುದಾಗಿ ವರದಿಯಾಗಿದೆ.

ಖಶೋಗಿಯವರನ್ನು ಸೌದಿ ಕಾನ್ಸುಲೇಟ್ ನಲ್ಲಿ ಹತ್ಯೆಗೈಯಲಾಗಿದೆ ಎಂದು ಟರ್ಕಿ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News