ರಾಜತಾಂತ್ರಿಕ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Update: 2018-10-16 12:38 GMT

ಬೆಂಗಳೂರು, ಅ.16: ಇಥಿಯೋಪಿಯಾ ದೇಶದ ಗೌರವ ರಾಜತಾಂತ್ರಿಕ ಅಧಿಕಾರಿ ಎನ್ನಲಾದ ಉದ್ಯಮಿ ರಾಮಕೃಷ್ಣ , 23 ವರ್ಷದ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಸದಾಶಿವನಗರದ ಸೆರೆನಿಟಿ ಥೈ ಸ್ಪಾಗೆ ತೆರಳಿದ್ದ ರಾಮಕೃಷ್ಣ, ಯುವತಿಗೆ ದೈಹಿಕ ಸಂಪರ್ಕಬೇಕೆಂದು ಒತ್ತಾಯಿಸಿ, ಆಕೆಯನ್ನು ಹಿಡಿದುಕೊಂಡಿದ್ದಾರೆ ಎನ್ನಲಾಗಿದೆ.

ಘಟನೆ ಬಳಿಕ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದ ವೇಳೆ ಅವರ ವಿರುದ್ಧವೂ ಕೂಗಿ, ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News