ಪ್ರೊ ಕಬಡ್ಡಿ ಲೀಗ್: ಬಂಗಾಳಕ್ಕೆ ಸತತ ಜಯ

Update: 2018-10-16 18:45 GMT

ಸೋನೆಪತ್, ಅ.16: ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡವನ್ನು 30-25 ಅಂತರದಿಂದ ಮಣಿಸಿದ ಬಂಗಾಳ ವಾರಿಯರ್ಸ್ ಸತತ ಎರಡನೇ ಗೆಲುವು ದಾಖಲಿಸಿದೆ.

ಬಂಗಾಳದ ಪರ ಮಣಿಂದರ್ ಸಿಂಗ್ 11 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು. ತೆಲುಗು ತಂಡ ಹಲವು ಅವಕಾಶವನ್ನು ಕೈಚೆಲ್ಲಿ ನಿರಾಸೆಗೊಳಿಸಿತು. ತೆಲುಗು ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ.

ತೆಲುಗು ತಂಡ ಬಿ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಬಂಗಾಳ 3ನೇ ಸ್ಥಾನದಲ್ಲಿದೆ.

ದಿನದ 2ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಹರ್ಯಾಣ ಸ್ಟೀಲರ್ಸ್ ತಂಡವನ್ನು 36-33 ಅಂತರದಿಂದ ಮಣಿಸಿತು. ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು.

ನಿತಿನ್ ರಾವಲ್(11 ಅಂಕ) ಆಲ್‌ರೌಂಡ್ ಪ್ರದರ್ಶನ ಹಾಗೂ ಅನೂಪ್ ಕುಮಾರ್ ನಿರ್ಣಾಯಕ ಅಂಕ ಜೈಪುರ ಗೆಲುವಿಗೆ ನೆರವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News