ಶ್ರೀಲಂಕಾ ಅಧ್ಯಕ್ಷರ ಹತ್ಯೆಗೆ ಸಂಚು ?: ‘ರಾ’ ಮೇಲೆ ಗೂಬೆ ಕೂರಿಸಿದ ಶ್ರೀಲಂಕಾ ಸಚಿವ

Update: 2018-10-19 16:46 GMT

ಕೊಲಂಬೊ,ಅ.12: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಹತ್ಯೆಗೆ ಸಂಚು ನಡೆಯುತ್ತಿದೆಯೆಂಬ ಬೇಹುಗಾರಿಕಾ ವರದಿಗಳ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

 ಶ್ರೀಲಂಕಾದ ಅಧ್ಯಕ್ಷೀಯ ಸಲಹೆಗಾರರಲ್ಲೊಬ್ಬರಾದ ಶಿರಾಲ್ ಲಖ್ತಿಲಾಕಾ ಅವರು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಸಿರಿಸೇನಾ ಅವರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದರು.

      ಮಂಗಳವಾರ ಕೊಲಂಬೊದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಿರಿಸೇನಾ ಅವರು ತನ್ನ ಹಾಗೂ ಮಾಜಿ ರಕ್ಷಣಾ ಕಾರ್ಯದರ್ಶಿ ಗೋಟಾಭಯಾ ರಾಜಪಕ್ಷ ಅವರ ಹತ್ಯೆಗೆ ಸಂಚು ನಡೆಯುತ್ತಿದೆಯೆಂಬ ವರದಿಗಳನ್ನು ಆಡಳಿತಾರೂಢ ಮೈತ್ರಿಕೂಟ ಸರಕಾರದ ಹಿರಿಯ ಪಾಲುದಾರ ಪಕ್ಷವಾದ ಯುಎನ್‌ಪಿಯು ಗಂಭೀರವಾಗಿ ಪರಿಗಣಿಸಸುತ್ತಿಲ್ಲವೆಂದು ಆಪಾದಿಸಿದ್ದರು.

 ಭಾರತದ ಬೇಹುಗಾರಿಕಾ ಸಂಸ್ಥೆ ‘ರಾ’ಈ ಹತ್ಯೆ ಸಂಚಿನ ಹಿಂದಿದೆಯೆಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಶ್ರೀಲಂಕಾ ಸಚಿವರೊಬ್ಬರು ಆಪಾದಿಸಿದ್ದಾರೆ. ಆದರೆಶ್ರೀಲಂಕಾ ವಿದೇಶಾಂಗ ಸಚಿವಾಲಯವು ಈ ವರದಿಗಳನ್ನು ಆಧಾರರಹಿತ ಹಾಗೂ ಸುಳ್ಳು ಎಂದು ಬಣ್ಣಿಸಿದೆ.

ಈ ಮಧ್ಯೆ ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬುಧವಾರ ದೂರವಾಣಿ ಕರೆ ಮಾಡಿ, ತನ್ನ ಹತ್ಯೆಗೆ ರಾ ಸಂಚು ಹೂಡಿದೆಯೆಂಬುದಾಗಿ ತಾನು ಆಪಾದಿಸಿದ್ದೆನಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಅಪ್ಪಟ ಸುಳ್ಳು ಹಾಗೂ ಆಧಾರರಹಿತವಾದವು ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News