ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ: ಹಾಕಿ ಗೋಲ್‌ಕೀಪರ್ ಆಕಾಶ್‌ಗೆ 2 ವರ್ಷ ನಿಷೇಧ

Update: 2018-10-19 18:50 GMT

ಹೊಸದಿಲ್ಲಿ, ಅ.19: ವರ್ಷಾರಂಭದಲ್ಲಿ ನಡೆದ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿದ್ದ ಭಾರತದ ಹಾಕಿ ಗೋಲ್‌ಕೀಪರ್ ಆಕಾಶ್ ಚಿಟ್ಕೆಗೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ(ನಾಡಾ)ಎರಡು ವರ್ಷಗಳ ನಿಷೇಧ ವಿಧಿಸಿದೆ.

ನಾಡಾ ಮಾರ್ಚ್ 27 ರಂದು ಆಕಾಶ್‌ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಅ.8 ರಂದು ಉದ್ದೀಪನಾ ಮದ್ದು ನಿಗ್ರಹ ಶಿಸ್ತು ಸಮಿತಿ ಅಂತಿಮ ವಿಚಾರಣೆ ನಡೆಸಿದ ಬಳಿಕ ಕನಿಷ್ಠ 2 ವರ್ಷಗಳ ನಿಷೇಧ ಹೇರಲಾಗಿದೆ.

ಫೆ.27 ರಂದು ಬೆಂಗಳೂರಿನಲ್ಲಿ ನಡೆದ ಹಿರಿಯ ಹಾಕಿ ತಂಡದ ಶಿಬಿರದ ವೇಳೆ ನಡೆಸಲಾಗಿದ್ದ ಡೋಪಿಂಗ್ ಪರೀಕ್ಷೆಯಲ್ಲಿ ಆಕಾಶ್ ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿರುವುದು ಪತ್ತೆಯಾಗಿತ್ತು.

ಆಕಾಶ್ ಅವರು ಡೋಪಿಂಗ್ ನಿಯಮ ಉಲ್ಲಂಘನೆ ಉದ್ದೇಶಪೂರ್ವಕವಾಗಿರಲಿಲ್ಲ. ಅವರು ಬಲಗಾಲಿನ ನೋವಿಗೆ ಔಷಧ ಪಡೆದಿದ್ದರು ಎಂದು ನಾಡಾ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅಂತಿಮ ಆದೇಶದಲ್ಲಿ ತಿಳಿಸಿದೆ. ಆಕಾಶ್ ಅವರೊಂದಿಗೆ ಇತರ ಆರು ಮಂದಿ ಅಥ್ಲೀಟ್‌ಗಳಿಗೆ ಡೋಪಿಂಗ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ 4 ವರ್ಷಗಳ ಕಾಲ ನಿಷೇಧ ವಿಧಿಸಲಾಗಿದೆ. ಆರು ಮಂದಿ ತಮ್ಮ ದೇಹದೊಂದಿಗೆ ನಿಷೇಧಿತ ದ್ರವ್ಯ ಹೇಗೆ ಹೋಗಿದೆ ಎಂದು ಸಾಬೀತು ಮಾಡಿಲ್ಲ. ನಿಷೇಧ ಎದುರಿಸುತ್ತಿರುವ ಇತರ 6 ಅಥ್ಲೀಟ್‌ಗಳು: ಕುಸ್ತಿಪಟು ಅಮಿತ್, ಕಬಡ್ಡಿ ಆಟಗಾರ ಪ್ರದೀಪ್ ಕುಮಾರ್, ವೇಟ್‌ಲಿಫ್ಟರ್ ನಾರಾಯಣ ಸಿಂಗ್, ಅಥ್ಲೀಟ್‌ಗಳಾದ ಸೌರಭ್ ಸಿಂಗ್, ಬಲಿ್ಜೀತ್ ಕೌರ್ ಹಾಗೂ ಸಿಮ್ರಾನ್‌ಜಿತ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News