ಪ್ರೊ ಕಬಡ್ಡಿ: ತೆಲುಗು ಟೆಟಾನ್ಸ್ ಗೆ ರೋಚಕ ಜಯ

Update: 2018-10-19 18:57 GMT

ಪುಣೆ, ಅ.19: ವಿಶಾಲ್ ಭಾರದ್ವಾಜ್ ಹಾಗೂ ಅಬೊಝರ್ ಮಿಝಾನಿ ಅವರ ಅತ್ಯುತ್ತಮ ಪ್ರದರ್ಶನ ನೆರವಿನಿಂದ ತೆಲುಗು ಟೈಟಾನ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಶುಕ್ರವಾರ ಪಾಟ್ನಾ ಪೈರೇಟ್ಸ್ ತಂಡವನ್ನು 35-31 ಅಂತರದಿಂದ ಮಣಿಸಿತು.

ಇಬ್ಬರು ಡಿಫೆಂಡರ್‌ಗಳು ಒಟ್ಟಿಗೆ 11 ಅಂಕ ಗಳಿಸಿ ಟೈಟಾನ್ಸ್ ತಂಡ ಈ ಋತುವಿನಲ್ಲಿ ಟೈಟಾನ್ಸ್‌ಗೆ ಮೂರನೇ ಗೆಲುವು ತಂದರು.

ಪಾಟ್ನಾ ತಂಡ ಎರಡನೇ ಸೋಲು ಕಂಡಿದೆ. ಪಾಟ್ನಾ ಪರ ಮಂಜೀತ್ ಹಾಗೂ ವಿಜಯ್ ಒಟ್ಟಿಗೆ 16 ಅಂಕ ಗಳಿಸಿದರು. ಇದು ಪಾಟ್ನಾದ ಗೆಲುವಿಗೆ ಸಾಕಾಗಲಿಲ್ಲ. ತೆಲುಗು ತಂಡ ಪರ ರಾಹುಲ್ ಚೌಧರಿ 7 ರೈಡ್ ಪಾಯಿಂಟ್ಸ್ ಗಳಿಸಿದರು. ಇದೇ ವೇಳೆ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ಪಿಂಕಿ ಪ್ಯಾಂಥರ್ಸ್ ತಂಡವನ್ನು 29-25 ಅಂಕಗಳ ಅಂತರದಿಂದ ಸೋಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News