ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ಕೊಹ್ಲಿ

Update: 2018-10-22 05:04 GMT

ಗುವಾಹತಿ, ಅ.22:  ನಾಯಕ ವಿರಾಟ್ ಕೊಹ್ಲಿ ಅತ್ಯಂತ ವೇಗವಾಗಿ 60 ಅಂತರ್‌ರಾಷ್ಟ್ರೀಯ ಶತಕಗಳನ್ನು ಸಿಡಿಸಿದ ಭಾರತದ ಮೊದಲಿಗನೆಂಬ ಕೀರ್ತಿಗೆ ಭಾಜನರಾದರು.

ರವಿವಾರ ಗುವಾಹತಿಯಲ್ಲಿ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ದಿಲ್ಲಿ ದಾಂಡಿಗ ಕೊಹ್ಲಿ ಈ ದಾಖಲೆ ನಿರ್ಮಿಸಿದರು.

ಕೊಹ್ಲಿ 386 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದರು, ಸಚಿನ್ ತೆಂಡುಲ್ಕರ್‌ಗಿಂತ 40 ಇನಿಂಗ್ಸ್‌ಗಿಂತ ಮೊದಲೇ ಈ ಗುರಿ ತಲುಪಿ ಸಚಿನ್ ದಾಖಲೆಯನ್ನು ಮುರಿದರು.

 ಕೊಹ್ಲಿ ಇದೀಗ ಏಕದಿನ ಕ್ರಿಕೆಟ್‌ನಲ್ಲಿ 36 ಶತಕ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 24 ಶತಕಗಳನ್ನು ಸಿಡಿಸಿದ್ದಾರೆ. 60 ಅಂತರ್‌ರಾಷ್ಟ್ರೀಯ ಶತಕ ಪೂರೈಸಿದ ಐದನೇ ಕ್ರಿಕೆಟಿಗ ಕೊಹ್ಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News