ಅಗ್ರಸ್ಥಾನ ಕಾಯ್ದುಕೊಂಡ ನಡಾಲ್

Update: 2018-10-22 18:33 GMT

ಪ್ಯಾರಿಸ್, ಅ.22: ರಶ್ಯದ ಕರೆನ್ ಖಚನೊವ್ ಸೋಮವಾರ ಬಿಡುಗಡೆಯಾದ ಎಟಿಪಿ ಟೆನಿಸ್ ರ್ಯಾಂಕಿಂಗ್‌ನಲ್ಲಿ ಅಗ್ರ-20ಕ್ಕೆ ಭಡ್ತಿ ಪಡೆದಿದ್ದಾರೆ. ಮೂರನೇ ಶ್ರೇಯಾಂಕದ ಖಚನೊವ್ ರವಿವಾರ ಫ್ರಾನ್ಸ್‌ನ ಅಡ್ರಿಯನ್ ಮನ್ನಾರಿನೊ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿ ಕ್ರೆಮ್ಲಿನ್ ಕಪ್ ಜಯಿಸಿದ್ದರು. ಈ ಋತುವಿನಲ್ಲಿ 2ನೇ ಪ್ರಶಸ್ತಿ ಜಯಿಸಿರುವ ಖಚನೊವ್ ರ್ಯಾಂಕಿಂಗ್‌ನಲ್ಲಿ 19ನೇ ಸ್ಥಾನಕ್ಕೇರಿದ್ದಾರೆ.

ಎಟಿಪಿ ರ್ಯಾಂಕಿಂಗ್‌ನಲ್ಲಿ ಸ್ಪೇನ್‌ನ ರಫೆಲ್ ನಡಾಲ್ ನಂ.1 ಸ್ಥಾನದಲ್ಲೂ, ನೊವಾಕ್ ಜೊಕೊವಿಕ್ ಹಾಗೂ ರೋಜರ್ ಫೆಡರರ್ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News