ಇಸ್ಕಾನ್ ಸಂಸ್ಥೆಯ ಶ್ಲಾಘನೀಯ ಕೆಲಸ: ಡಿಸಿಎಂ ಡಾ.ಜಿ.ಪರಮೇಶ್ವರ್
Update: 2018-10-25 21:09 IST
ಬೆಂಗಳೂರು, ಅ. 25: ಬಡತನದ ಕುಟುಂಬದಿಂದ ಬಂದು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಇಸ್ಕಾನ್ ಸಂಸ್ಥೆವತಿಯಿಂದ ನೀಡುವ ವಿದ್ಯಾರ್ಥಿ ವೇತನವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿತರಣೆ ಮಾಡಿದರು.
ಗುರುವಾರ ಬಿಡಿಎ ಕ್ವಾಟ್ರರ್ಸ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸ್ ಕಾನ್‌ಸ್ಟೇಬಲ್, ಹೂ ಮಾರಿಕೊಂಡು ಜೀವನ ನಡೆಸುವ ಬಡ ಕುಟುಂಬದ ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಅವರಿಗೆ ಇಸ್ಕಾನ್‌ನಿಂದ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.
ಹೆಚ್ಚು ಅಂಕ ಪಡೆದ ಬಡ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ 10 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಬಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಇಸ್ಕಾನ್ ಸಂಸ್ಥೆ ಈ ಕಾರ್ಯ ಅನುಕರಣೀಯ ಎಂದು ತಿಳಿಸಿದರು.