ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಈಗ ಚೀನಾದತ್ತ ಪಾಕ್ ನೋಟ

Update: 2018-10-26 16:10 GMT

ಇಸ್ಲಾಮಾಬಾದ್, ಅ. 26: ದೇಶದ ಕುಸಿಯುತ್ತಿರುವ ಆರ್ಥಿಕತೆಯನ್ನು ಮೇಲೆತ್ತಲು ಸೌದಿ ಅರೇಬಿಯದಿಂದ 600 ಕೋಟಿ ಡಾಲರ್ ನೆರವು ಪಡೆದ ಬಳಿಕ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈಗ ಚೀನಾದತ್ತ ನೋಡುತ್ತಿದ್ದಾರೆ.

ಇಮ್ರಾನ್ ಮುಂದಿನ ವಾರ ಚೀನಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಇದು ಪ್ರಧಾನಿಯಾದ ಬಳಿಕ ಇಮ್ರಾನ್ ಖಾನ್ ಚೀನಾಕ್ಕೆ ನೀಡುತ್ತಿರುವ ಪ್ರಥಮ ಭೇಟಿಯಾಗಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ಪಡೆಯುವ ಸಾಲದ ಗಾತ್ರವನ್ನು ತಗ್ಗಿಸಲು ಎರಡು ದೇಶಗಳಿಂದ ಸೌದಿ ಮಾದರಿಯ ನೆರವನ್ನು ಪಡೆಯಲು ಉದ್ದೇಶಿಸಿದ್ದೇನೆ ಎಂಬುದಾಗಿ ಬುಧವಾರ ದೇಶವನ್ನುದ್ದೇಶಿಸಿ ಮಾಡಿದ ಟೆಲಿವಿಶನ್ ಭಾಷಣದಲ್ಲಿ ಇಮ್ರಾನ್ ಖಾನ್ ಹೇಳಿದ್ದಾರೆ. ಆದರೆ, ಆ ದೇಶಗಳು ಯಾವುದು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News