ಪ್ರಜ್ಞೇಶ್ ಸೆಮಿಫೈನಲ್‌ಗೆ

Update: 2018-10-26 18:38 GMT

 ಬೀಜಿಂಗ್, ಅ.26: ಭಾರತದ ಉದಯೋನ್ಮುಖ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರು ಚೀನಾದ ಲಿಯುಝೌನಲ್ಲಿ ನಡೆಯುತ್ತಿರುವ ಲಿಯುಝೌ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.

  ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಪ್ರಜ್ಞೇಶ್ ಅವರು ಇಟಲಿಯ ಮೂರನೇ ಶ್ರೇಯಾಂಕದ ಥಾಮಸ್ ಫ್ಯಾಬಿಯಾನೊ ವಿರುದ್ಧ 6-7(5), 6-1, 6-3 ಅಂತರದಲ್ಲಿ ಜಯ ಗಳಿಸಿದರು. ಪ್ರಜ್ಞೇಶ್ ಸೆಮಿಫೈನಲ್‌ನಲ್ಲಿ ಮೊಲ್ಡೋವಾದ ರಾಡು ಅಲ್ಬೊಟ್‌ರನ್ನು ಎದುರಿಸುವರು. ಅವರು ಇನ್ನೊಂದು ಸೆಮಿಫೈನಲ್‌ನಲ್ಲಿ ಚೀನಾದ ಡಿ ವ್ಯೆವಿರುದ್ಧ 6-0, 3-6, 6-3 ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News