ಪಿಟ್ಸ್ ಬರ್ಗ್ ನಲ್ಲಿ ಶೂಟೌಟ್: ಕನಿಷ್ಠ 8 ಮಂದಿ ಮೃತ್ಯು

Update: 2018-10-27 17:50 GMT

ಪಿಟ್ಸ್‌ಬರ್ಗ್,ಅ.27: ಅಮೆರಿಕದ ಪಿಟ್ಸ್‌ಬರ್ಗ್ ನಗರದಲ್ಲಿ ಸಿನಗಾಗ್ ಎಂದು ಕರೆಯಲ್ಪಡುವ ಯಹೂದಿ ಪ್ರಾರ್ಥನ ಮಂದಿರದ ಬಳಿ ನಡೆದ ಗುಂಡಿನ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಮಾಧ್ಯಮ ವರದಿಯ ಪ್ರಕಾರ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದ್ದರೆ, ಮೃತರ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಸರಕಾರಿ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ದಾಳಿಕೋರನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ಗಾಯಾಳುಗಳನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಘಟನೆಗೂ ಮುನ್ನ ಪೊಲೀಸ್ ಇಲಾಖೆಯನ್ನೂ ಒಳಗೊಂಡ ಪೀಟ್ಸ್‌ಬರ್ಗ್‌ನ ಸಾರ್ವಜನಿಕ ಸುರಕ್ಷತೆ ಇಲಾಖೆಯು, ಪಿಟ್ಸ್‌ಬರ್ಗ್ ಸಿನಗಾಗ್ ಬಳಿ ದಾಳಿಕೋರನೊರ್ವ ತಿರುಗಾಡುತ್ತಿದ್ದು ಜನರು ಎಚ್ಚರಿಕೆಯಿಂದ ಇರುವಂತೆ ಟ್ವಿಟರ್‌ನಲ್ಲಿ ತಿಳಿಸಿದ್ದರು.

ಅಮೆರಿಕದಲ್ಲಿ ನಡೆಯುವ ಶೂಟೌಟ್ ಪ್ರಕರಣಗಳ ಸಾಲಿಗೆ ಪೀಟ್ಸ್‌ಬರ್ಗ್ ಸಿನಗಾಗ್ ಶೂಟೌಟ್ ಹೊಸ ಸೇರ್ಪಡೆಯಾಗಿದೆ. ಅಮೆರಿಕದಲ್ಲಿ ವಾರ್ಷಿಕ 30,000 ಮಂದಿ ಗುಂಡಿನ ದಾಳಿ ಘಟನೆಗಳಲ್ಲಿ ಸಾವನ್ನಪ್ಪುತ್ತಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News