ಗುಜರಾತ್‌ನಲ್ಲಿ ಝಿಕಾ ವೈರಸ್ ಪತ್ತೆ

Update: 2018-10-28 16:17 GMT

ಹೊಸದಿಲ್ಲಿ,ಅ.28: ಭಾರತದಲ್ಲಿ ಝಿಕಾ ಹಾವಳಿ ಹರಡುತ್ತಿದ್ದು,ಇದೀಗ ಗುಜರಾತ್‌ನಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ನೆರೆಯ ರಾಜಸ್ಥಾನದಲ್ಲಿ ಈ ವರ್ಷ ಸುಮಾರು 150 ಝಿಕಾ ಪ್ರಕರಣಗಳು ವರದಿಯಾಗಿವೆ.

ಮಹಿಳೆಯೋರ್ವಳು ಝಿಕಾ ವೈರಸ್ ಸೋಂಕಿಗೊಳಗಾಗಿದ್ದು,ಅಹ್ಮದಾಬಾದ್‌ನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ರಾಜಸ್ಥಾನದ ಹೊರಗೆ ದೃಢಪಟ್ಟಿರುವ ಮೊದಲ ಝಿಕಾ ಪ್ರಕರಣವಾಗಿದೆ. ಈವರೆಗೆ ಇದೊಂದೇ ಪ್ರಕರಣ ಪತ್ತೆಯಾಗಿದ್ದು,ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗುಜರಾತ್‌ನ ಆರೋಗ್ಯ ಆಯುಕ್ತೆ ಜಯಂತಿ ರವಿ ಅವರು ರವಿವಾರ ಸುದ್ದಿಗಾರರಿಗೆ ತಿಳಿಸಿದರು.

ರಾಜಸ್ಥಾನದಲ್ಲಿ ಸೆಪ್ಟೆಂಬರ್‌ನಿಂದೀಚಿಗೆ 147 ಝಿಕಾ ಪ್ರಕರಣಗಳು ವರದಿಯಾಗಿದ್ದು ಕಳೆದ ತಿಂಗಳು ರಾಜಧಾನಿ ಜೈಪುರದಲ್ಲಿ ಸುಮಾರು 4.40 ಲ.ಜನರ ಮೇಲೆ ನಿಗಾಯಿರಿಸಲಾಗಿತ್ತು

ಅಂದ ಹಾಗೆ ದೇಶದಲ್ಲಿ ಮೊದಲ ಝಿಕಾ ಪ್ರಕರಣ ಗುಜರಾತ್‌ನಲ್ಲಿಯೇ ಜನವರಿ,2017ರಲ್ಲಿ ಪತ್ತೆಯಾಗಿತ್ತು. ಈಗಿನದು ಈ ವರ್ಷ ವರದಿಯಾಗಿರುವ ಮೊದಲ ಪ್ರಕರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News