ಪಿಟ್ಸ್ ಬರ್ಗ್ ಶೂಟಿಂಗ್ ಸಂತ್ರಸ್ತರಿಗೆ ನೆರವಾಗಲು ಅಮೆರಿಕನ್ ಮುಸ್ಲಿಮರಿಂದ ನಿಧಿ ಸಂಗ್ರಹ

Update: 2018-10-28 16:29 GMT

ನ್ಯೂಯಾರ್ಕ್, ಅ.28: ಪಿಟ್ಸ್ ಬರ್ಗ್ ಶೂಟಿಂಗ್ ಘಟನೆಯ ಸಂತ್ರಸ್ತರಿಗೆ ನೆರವಾಗಲು ಅಮೆರಿಕದ ಮುಸ್ಲಿಮರು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದು, ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಪಿಟ್ಸ್ ಬರ್ಗ್ ನಲ್ಲಿ ಸಂಭವಿಸಿದ ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

“ಘಟನೆಯಲ್ಲಿ ಗಾಯಗೊಂಡಿರುವವರು ಅಥವಾ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಯಹೂದಿಯರಿಗಾಗಿ ಈ ನೆರವು” ಎಂದು ಕಾರ್ಯಕ್ರಮದ ಸಂಘಟಕರೊಬ್ಬರು ತಿಳಿಸಿದ್ದಾರೆ. ‘ಲಾಂಚ್ ಗುಡ್’ ಎನ್ನುವ ಕ್ರೌಡ್ ಫಂಡಿಂಗ್ ಸೈಟ್ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪ್ರವಾದಿ ಮುಹಮ್ಮದರ ಬೋಧನೆಗಳು, ಜೀವನ ಮತ್ತು ವ್ಯಕ್ತಿತ್ವದ ಬಗ್ಗೆ ಅರಿವು ಮೂಡಿಸುವ ‘ಸೆಲೆಬ್ರೇಟ್ ಮರ್ಸಿ’ ಸಂಸ್ಥೆಯ ಸ್ಥಾಪಕ ಮತ್ತು ಅಮೆರಿಕನ್ ಮುಸ್ಲಿಮ್ ಆಗಿರುವ ತಾರ್ಕ್ ಎಲ್ ಮೆಸ್ಸಿದಿ ಎಂಬವರು ಈ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. 25 ಸಾವಿರ ಡಾಲರ್ ಗಳನ್ನು ಸಂಗ್ರಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಕೇವಲ ಆರೇ ಗಂಟೆಗಳಲ್ಲಿ ಈ ಗುರಿಯನ್ನು ತಲುಪಲಾಗಿದೆ. ಇದೀಗ 50 ಸಾವಿರ ಡಾಲರ್ ಸಂಗ್ರಹಿಸುವ ಗುರಿ ಹೊಂದಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News