ಎಸ್ ಬಿಐ ಡೆಬಿಟ್ ಕಾರ್ಡ್ ಮೂಲಕ ನಗದು ವಿಥ್ ಡ್ರಾ ಮಿತಿ ಇಂದಿನಿಂದ 20 ಸಾವಿರ ರೂ .

Update: 2018-10-31 04:58 GMT

ಹೊಸದಿಲ್ಲಿ, ಅ.31:  ಪ್ರತಿನಿತ್ಯ ಕ್ಲಾಸಿಕ್ ಆ್ಯಂಡ್ ಮೆಸ್ಟ್ರೊ ಡೆಬಿಟ್ ಕಾರ್ಡ್ ಬಳಸಿ ಎಟಿಎಂನಿಂದ ನಗದು ಹಿಂಪಡೆಯುವ ಮಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೂ.40 ಸಾವಿರದಿಂದ ರೂ. 20 ಸಾವಿರಕ್ಕೆ ಸೀಮಿತಗೊಳಿಸಿದೆ.

ಬುಧವಾರ   ಎಸ್ ಬಿಐ ನ  ನಿರ್ಧಾರ  ಜಾರಿಗೆ ಬಂದಿದೆ. ಎಟಿಎಂ  ಮೂಲಕ ಹಣ ಪಡೆಯುವ ಮಿತಿಯನ್ನು  ಬಳಕೆದಾರರು  ಹೆಚ್ಚಿಸಿಕೊಳ್ಳಬೇಕಾದರೆ ಅಧಿಕ ಮಿತಿಯ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು.

ದೇಶದಲ್ಲಿ ಎಟಿಎಂ ನಿಂದ ಹಣ ಕಳವು ಮತ್ತು  ಮೋಸವನ್ನು  ತಡೆಯಲು   ಮತ್ತು ಡಿಜಿಟಲ್ ವ್ಯವಹಾರಗಳಿಗೆ  ಇನ್ನಷ್ಟು ಉತ್ತೇಜನ ನೀಡಲು  ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಸ್‍ಬಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News