ಗ್ಯಾಸ್ ರೀ ಫಿಲ್ಲಿಂಗ್ ದಂಧೆ: ಓರ್ವನ ಬಂಧನ, 91 ಸಿಲಿಂಡರ್ ಜಪ್ತಿ

Update: 2018-11-03 14:09 GMT

ಬೆಂಗಳೂರು, ನ.3: ಗ್ಯಾಸ್ ರೀ ಫಿಲ್ಲಿಂಗ್ ಮಾಡಿ ಅವುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಚಿಕ್ಕಜಾಲ ಠಾಣಾ ಪೊಲೀಸರು, 91 ಸಿಲಿಂಡರ್‌ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಹೆಬ್ಬಾಳ, ಕನಕನಗರದ 2ನೆ ಕ್ರಾಸ್ ನಿವಾಸಿ ವಿನೋದ್ (21) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ವಿನೋದ್, ಚಿಕ್ಕಜಾಲದ ಕೋಡಗಲಹಟ್ಟಿಯ ನೀಲಗಿರಿ ತೋಪಿನ ಶೆಡ್‌ವೊಂದರಲ್ಲಿ ಗೃಹ ಬಳಕೆಯ ಸಿಲಿಂಡರ್‌ಗಳಿಂದ ಸಣ್ಣ ಸಿಲಿಂಡರ್‌ಗಳಿಗೆ ಅನಿಲ ತುಂಬಿಸಿ ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಚಿಕ್ಕಜಾಲ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಗ್ಯಾಸ್ ರೀಫಿಲ್ ಮಾಡುವ ಮೋಟಾರ್ ಪಂಪ್, ರೀಫಿಲ್ ಮಾಡುವ ಎಕ್ಸ್‌ಚೇಂಜ್ ಪೈಪ್, ಒಂದು ಡಿಜಿಟಲ್ ತೂಕದ ಮಿಷನ್, 14.5 ಕೆ.ಜಿ.ತೂಕದ 12 ಸಿಲಿಂಡರ್, 5 ಕೆ.ಜಿ. ತೂಕದ 70 ಸಿಲಿಂಡರ್, 2 ಕೆಜಿ ತೂಕದ 9 ಸಿಲಿಂಡರ್ ಸೇರಿ 91 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News