ಟಿಪ್ಪು ಜಯಂತಿ ಆಚರಣೆ ಕೈಬಿಡಿ: ಬಿಎಸ್‌ವೈ

Update: 2018-11-05 12:56 GMT

ಬೆಂಗಳೂರು, ನ. 5: ರಾಜ್ಯದ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಷ್ಠೆಯ ವಿಷಯವನ್ನಾಗಿ ಮಾಡದೆ ಟಿಪ್ಪು ಜಯಂತಿ ಆಚರಣೆಯನ್ನು ರಾಜ್ಯ ಸರಕಾರ ಕೂಡಲೇ ಕೈಬಿಡಬೇಕು ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ರಾಜ್ಯದ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕೆಂಬ ಇಚ್ಛೆ ಸರಕಾರಕ್ಕೆ ಇದ್ದರೆ ಇಂತಹ ಆಚರಣೆಯನ್ನು ಕೈಬಿಡಬೇಕು. ಇಂತಹ ಸಂದಭರ್ದಲ್ಲಿ ವ್ಯಕ್ತಿತ್ವದ ಬಗ್ಗೆ ಚರ್ಚೆ ಅನಗತ್ಯ. ಟಿಪ್ಪುವಿನ ವ್ಯಕ್ತಿತ್ವ ವಿವಾದದಿಂದ ಕೂಡಿದೆ ಎಂದು ಬಿಎಸ್‌ವೈ ಹೇಳಿದ್ದಾರೆ.

ದೇಶಪ್ರೇಮ ಮತ್ತು ದೇಶದ ಮಹಾನುಭಾವರ ಬಗ್ಗೆ ಅಭಿಮಾನವಿದ್ದರೆ ಅಬ್ದುಲ್ ಕಲಾಂ ಅಥವಾ ಅಬ್ದುಲ್ ಹಮೀದ್ ಅವರ ಜಯಂತಿಯನ್ನು ಸರಕಾರ ಆಚರಿಸಲಿ ಎಂದ ಬಿಎಸ್‌ವೈ, ಟಿಪ್ಪು ಜಯಂತಿ ಆಚರಣೆ ಕೈಬಿಟ್ಟು, ಜನತೆ ನೆಮ್ಮದಿಯಿಂದ ದೀಪಾವಳಿ ಆಚರಿಸಲು ಅನುವು ಮಾಡಿಕೊಡಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News