×
Ad

ನ.14ಕ್ಕೆ ವಿಕಲಚೇತನರಿಗಾಗಿ ರಸಪ್ರಶ್ನೆ ಕಾರ್ಯಕ್ರಮ

Update: 2018-11-05 20:36 IST

ಬೆಂಗಳೂರು, ನ. 5: ವಿಕಲಚೇತನ ಅಂತರ್‌ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಸೇವಾ ಇನ್ ಆ್ಯಕ್ಷನ್ ಸಂಸ್ಥೆಯು ಎಲ್‌ಟಿಐ ಸಹಭಾಗಿತ್ವದೊಂದಿಗೆ ರಸಪ್ರಶ್ನೆ ಸ್ಪರ್ಧೆ ‘ಕ್ವಿಜೆಬಲ್ಡ್-2018’ ಕಾರ್ಯಕ್ರಮವನ್ನು ವಿಕಲಚೇತನ ಮಕ್ಕಳಿಗಾಗಿ ನ.14ರಂದು ನೋಡಲ್ ಶಾಲೆಗಳ ಕೇಂದ್ರಗಳಲ್ಲಿ ಏರ್ಪಡಿಸುವುದಾಗಿ ತಿಳಿಸಿದೆ.

ಸೋಮವಾರ ನಗರದಲ್ಲಿ ಆಯೋಜಿಸಿದ್ದ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕಿ ಮಂಜುಳ ನಂಜುಂಡಯ್ಯ, ಸ್ಪರ್ಧೆಯನ್ನು ಮೈಂಡ್‌ಕಾಂಗ್ಸ್ ನಡೆಸಿಕೊಡಲಿದ್ದು, ನ.14ರಂದು ನಡೆಯಲಿರುವ ಪ್ರಿಲಿಮ್ಸ್‌ನಲ್ಲಿ ಆಯ್ಕೆಯಾದವರು ನ.24ರಂದು ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಫೈನಲ್ಸ್‌ನಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಸ್ಪರ್ಧೆಯು ನಗರದಲ್ಲಿ ವಿಶೇಷ ಹಾಗೂ ಸಾಮಾನ್ಯ ಶಾಲೆಗಳಲ್ಲಿ ಓದುತ್ತಿರುವ ವಿಕಲಚೇತನ ಮಕ್ಕಳಿಗಾಗಿ ನಡೆಸುವ ಸ್ಪರ್ಧೆಯಾಗಿದೆ. ದೇಶದಲ್ಲೇ ಇದು ವಿವಿಧ ರೀತಿಯ ವಿಕಲಚೇತನರಿಗೆ ಅವರ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶಗಳನ್ನು ನೀಡುತ್ತಿರುವ ಒಂದು ಪ್ರವರ್ತಕ ಉಪಕ್ರಮವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-25520347 ಅನ್ನು ಸಂಪರ್ಕಿಸಲು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News