ಹಾಜಿ ಶೇಕುಂಞಿ ಜೋಕಟ್ಟೆ

Update: 2018-11-08 16:33 GMT

ಮಂಗಳೂರು, ನ.8: ಜೋಕಟ್ಟೆ ನಿವಾಸಿ ಹಾಜಿ ಬಿ.ಶೇಕುಂಞಿ (85) ಗುರುವಾರ ಮಂಗಳೂರಿನಲ್ಲಿರುವ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.

ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಹಾಜಿ ಬಿ.ಶೇಕುಂಞಿ ಜೋಕಟ್ಟೆ ಪರಿಸರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ್ದರು. ಜೋಕಟ್ಟೆಯ ಮಸೀದಿಯ ಅಧ್ಯಕ್ಷರಾಗಿಯೂ ಹಲವು ವರ್ಷ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಉದ್ಯಮಿಗಳಾದ ಝಕರಿಯಾ ಬಜ್ಪೆ ಮತ್ತು ಬಿ.ಎಂ.ಶರೀಫ್ (ವೈಟ್‌ಸ್ಟೋನ್) ಸಹಿತ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ನಾಳೆ ಜೋಕಟ್ಟೆ ಜುಮಾ ಮಸೀದಿಯಲ್ಲಿ ಫಜ್ರ್ ನಮಾಝ್ ಬಳಿಕ ಮೃತರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸಂತಾಪ: ಶೇಕುಂಞಿಯವರ ನಿಧನಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ