ಆಫ್ರಿಕ, ಭಾರತ ವಿರುದ್ಧ ಟ್ವೆಂಟಿ-20 ಸರಣಿಗೆ ಆಸ್ಟ್ರೇಲಿಯ ತಂಡ ಪ್ರಕಟ

Update: 2018-11-08 18:33 GMT

ಮೆಲ್ಬೋರ್ನ್, ನ.8: ದಕ್ಷಿಣ ಆಫ್ರಿಕ ವಿರುದ್ಧ ಏಕೈಕ ಟ್ವೆಂಟಿ-20 ಮತ್ತು ಭಾರತ ವಿರುದ್ಧ ನಿಗದಿಯಾಗಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ಆಸ್ಟ್ರೇಲಿಯ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ.

ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ , ಸ್ಪಿನ್ನರ್ ನಥಾನ್ ಲಿಯೋನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆಲ್‌ರೌಂಡರ್ ಮಿಚೆಲ್ ಮಾರ್ಷ್‌ಗೆ 13 ಮಂದಿಯ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.

 ಗೋಲ್ಡ್‌ಕೋಸ್ಟ್‌ನಲ್ಲಿ ನ.17ರಂದು ದಕ್ಷಿಣ ಆಫ್ರಿಕ ವಿರುದ್ಧ ಏಕೈಕ ಪಂದ್ಯವನ್ನು ಆಸ್ಟ್ರೇಲಿಯ ಆಡಲಿದೆ. ಭಾರತದ ವಿರುದ್ಧ ಟ್ವೆಂಟಿ-20 ಸರಣಿ ನ.21ರಂದು ಆರಂಭವಾಗಲಿದೆ. ಆ್ಯರೊನ್ ಫಿಂಚ್ ಆಸ್ಟ್ರೇಲಿಯ ತಂಡವನ್ನು ನಾಯಕರಾಗಿ ಮುನ್ನಡೆಸುವರು.

ಭಾರತ ವಿರುದ್ಧ ಸರಣಿಗೂ ಮುನ್ನ ಗೋಲ್ಡ್ ಕೋಸ್ಟ್‌ನಲ್ಲಿನಡೆಯಲಿರುವ ದಕ್ಷಿಣ ಆಫ್ರಿಕ ವಿರುದ್ಧ ನಡೆಯಲಿರುವ ಏಕೈಕ ಸರಣಿಯ ವೇಳೆ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸೇರಲಿದ್ದು, ಭಾರತ ವಿರುದ್ಧ ಸರಣಿಗೆ ತಂಡವನ್ನು ಅಂತಿಮಗೊಳಿಸಲಿದೆ.

ವೇಗಿ ಪೀಟರ್ ಸಿಡ್ಲ್ ಅವರನ್ನು ಟ್ವೆಂಟಿ- ತಂಡಕ್ಕೆ ಸೇರಿಸಿಕೊಂಡಿಲ್ಲ. ಅವರು ಭಾರತ ವಿರುದ್ಧ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದ್ದಾರೆ. ವೇಗಿ ಜಾಸನ್ ಬೆಹ್ರೆಂಡಾರ್ಫ್ ಅವರು ಸ್ಟಾರ್ಕ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಥಾನ್ ಕೌಲ್ಟರ್ ನೀಲ್, ಬಿಲ್ಲಿ ಸ್ಟಾನ್‌ಲೇಕ್ ತಂಡದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧ ಟ್ವೆಂಟಿ-20 ಸರಣಿಯಿಂದ ದೂರವಾಗಿದ್ದ ಮಾರ್ಕುಸ್ ಸ್ಟೋನಿಸ್ ತಂಡಕ್ಕೆ ವಾಪಸಾಗಿದ್ದಾರೆ.

ದಕ್ಷಿಣ ಆಫ್ರಿಕ ಮತ್ತು ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯ ಸೋಲು ಅನುಭವಿಸಿತ್ತು.

►ಆಸ್ಟ್ರೇಲಿಯ ತಂಡ : ಆ್ಯರೊನ್ ಫಿಂಚ್(ನಾಯಕ), ಅಲೆಕ್ಸ್ ಕ್ಯಾರೇ , ಅಸ್ಟನ್ ಅಗರ್, ಜಾಸನ್ ಬೆಹ್ರೆಂಡಾರ್ಫ್ , ನಥಾನ್ ಕೌಲ್ಟರ್ ನೀಲ್, ಕ್ರಿಸ್ ಲಿನ್, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ಮೆಕ್‌ಡರ್ಮೆಟ್, ಡಿ ಅರ್ಕಿ ಶಾರ್ಟ್, ಬಿಲ್ಲಿ ಸ್ಟಾನ್‌ಲೇಕ್, ಮಾರ್ಕುಸ್ ಸ್ಟೋನಿಸ್, ಆ್ಯಂಡ್ರೆ ಟೈ, ಆ್ಯಡಮ್ ಝಾಂಪಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News