ದೇಹದಾನ ಘೋಷಿಸಿದ ನಟ ಶಿವರಾಜ್ ಕುಮಾರ್
Update: 2018-11-09 19:41 IST
ಬೆಂಗಳೂರು, ನ.9: ಸತ್ತ ನಂತರ ನಮ್ಮ ದೇಹವೂ ಉಪಯೋಗಕ್ಕೆ ಬರಲಿ ಎಂಬುದು ನನ್ನ ಆಸೆ. ಹೀಗಾಗಿ ದೇಹದಾನ ಮಾಡಲು ನಿರ್ಧರಿಸಿದ್ದೇನೆಂದು ನಟ ಶಿವರಾಜ್ ಕುಮಾರ್ ಘೋಷಿಸಿದ್ದಾರೆ.
ಕವಚ ಸಿನೆಮಾದ ಟೀಸರ್ ರಿಲೀಸ್ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಪ್ಪಾಜಿ(ರಾಜ್ ಕುಮಾರ್) ನೇತ್ರದಾನ ಮಾಡಿ, ಇತರರಿಗೆ ಬೆಳಕಾಗಿದ್ದರು. ಹೀಗಾಗಿ ನಾನು, ತಮ್ಮ ಸಹೋದರರು ದೇಹದಾನ ಮಾಡಲು ನಿರ್ಧರಿಸಿದ್ದೇವೆಂದು ತಿಳಿಸಿದರು.
ಕವಚ ಸಿನೆಮಾದಲ್ಲಿ ನಟ ಶಿವರಾಜ್ ಕುಮಾರ್ ಅಂಧನಾಗಿ ನಟಿಸುತ್ತಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕಣ್ಣಿದ್ದರೂ ಕಣ್ಣಿಲ್ಲದಂತೆ ನಟಿಸುವುದು ತುಂಬಾ ಕಷ್ಟ. ಅಂಧರ ಭಾವನೆಗಳನ್ನು ಅರ್ಥ ಮಾಡಿಕೊಂಡು ನಟಿಸಲು ಪ್ರಯತ್ನಿಸುತ್ತಿದ್ದೇನೆ. ಇಂತಹ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದಕ್ಕೆ ಹೆಮ್ಮೆ ಪಡುತ್ತೇನೆಂದು ಸಂತಸ ಪಟ್ಟರು.