ನಾಯಕಿ ಕೌರ್ ಶತಕ; ಭಾರತಕ್ಕೆ 34ರನ್‌ಗಳ ಗೆಲುವು

Update: 2018-11-09 18:34 GMT

ಗಯಾನ, ನ.9: ಮಹಿಳೆೆಯರ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಶುಕ್ರವಾರ ನ್ಯೂಝಿಲೆಂಡ್‌ನ್ನು ಭಾರತ 34ರನ್‌ಗಳ ಅಂತರದಲ್ಲಿ ಮಣಿಸಿ ಶುಭಾರಂಭ ಮಾಡಿದೆ.

ಗೆಲುವಿಗೆ 195 ರನ್‌ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್‌ನ ವನಿತೆಯರ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 160ರನ್ ಗಳಿಸಿತು.

ಭಾರತದ ಹೇಮಲತಾ (26ಕ್ಕೆ 3), ಪೂನಮ್ ಯಾದವ್(33ಕ್ಕೆ 3) , ರಾಧಾ ಯಾದವ್(31ಕ್ಕೆ 2) ಮತ್ತು ಅರುಂಧತಿ ರೆಡ್ಡಿ(36ಕ್ಕೆ 1) ದಾಳಿಗೆ ಸಿಲುಕಿದ ನ್ಯೂಝಿಲೆಂಡ್ ತಂಡದ ಪರ ಆರಂಭಿಕ ಆಟಗಾರ್ತಿ ಸುಝೈ ಬ್ಯಾಟ್ಸ್ (67), ಕೇಟಿ ಮಾರ್ಟಿನ್(39) ಗರಿಷ್ಠ ಸ್ಕೋರ್ ದಾಖಲಿಸಿದರು.

ಇದಕ್ಕೂ ಮೊದಲು ಭಾರತ ನಾಯಕಿ ಹರ್ಮನ್‌ಪ್ರೀತ್ ಕೌರ್ ಶತಕ(103) ಮತ್ತು ಜಮೀಮಾ ರೋಡ್ರಿಗಸ್ ಅರ್ಧಶತಕ(59) ನೆರವಿನಲ್ಲಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 194 ರನ್ ಗಳಿಸಿತ್ತು. ಕೌರ್ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಶತಕ ದಾಖಲಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News