ಜೊಕೊವಿಕ್,ನಡಾಲ್, ಫೆಡರರ್ ಗೆ ಎಟಿಪಿ ವರ್ಲ್ಡ್ ಟೂರ್ ಪ್ರಶಸ್ತಿ

Update: 2018-11-10 09:45 GMT

ಲಂಡನ್, ನ.10: ಪುರುಷರ ಟೆನಿಸ್‌ನ ಮೂವರು ದಿಗ್ಗಜ ಆಟಗಾರರಾದ ನೊವಾಕ್ ಜೊಕೊವಿಕ್, ರಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ 2018ನೇ ಸಾಲಿನ ಎಟಿಪಿ ವರ್ಲ್ಡ್ ಟೂರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿ ಕೊನೆಗೊಂಡ ತಕ್ಷಣ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಈ ಮೂವರು ಆಟಗಾರರಿಗೆ ಪ್ರಶಸ್ತಿ ಪ್ರಕಟಿಸಲಾಯಿತು.

ಜೊಕೊವಿಕ್ ‘ವರ್ಷದ ಕಮ್‌ಬ್ಯಾಕ್ ಪ್ಲೇಯರ್’ ಪ್ರಶಸ್ತಿಗೆ ಭಾಜನರಾದರು. ಜೂನ್ ತಿಂಗಳ ಬಳಿಕ ನೀಡಿದ ಅಮೋಘ ಪ್ರದರ್ಶನಕ್ಕೆ ಜೊಕೊವಿಕ್‌ಗೆ ಈ ಪ್ರಶಸ್ತಿ ಒಲಿದಿದೆ. ಮೊಣಕೈ ಸರ್ಜರಿಯ ಬಳಿಕ ಮೊದಲಿನ ಲಯಕ್ಕೆ ಮರಳಲು ಪರದಾಡುತ್ತಿದ್ದ ಜೊಕೊವಿಕ್ ಒಂದು ಹಂತದಲ್ಲಿ ವಿಶ್ವದ ನಂ.22ನೇ ರ್ಯಾಂಕಿಗೆ ಕುಸಿದಿದ್ದರು.

ವಿಂಬಲ್ಡನ್ ಹಾಗೂ ಯುಎಸ್ ಓಪನ್ ಪ್ರಶಸ್ತಿ, ಸಿನ್ಸಿನಾಟಿ ಹಾಗೂ ಶಾಂೈ ಮಾಸ್ಟರ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದ ಜೊಕೊವಿಕ್ ಭರ್ಜರಿ ಫಾರ್ಮ್‌ಗೆ ಮರಳಿದ್ದರು. ಇತ್ತೀಚೆಗೆ ನಡಾಲ್‌ರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದರು. ನಡಾಲ್ ಸ್ಟೆಫನ್ ಎಡ್ಬರ್ಗ್ ಸ್ಪೋರ್ಟ್‌ಮ್ಯಾನ್‌ಶಿಪ್ ಪ್ರಶಸ್ತಿ ಪಡೆದರು. 2004ರಿಂದ ನಡಾಲ್ ಹಾಗೂ ಫೆಡರರ್ ಈ ಪ್ರಶಸ್ತಿ ಹಂಚಿಕೊಳ್ಳುತ್ತಿದ್ದಾರೆ. ಸತತ 7 ಸಹಿತ ಒಟ್ಟು 13 ಬಾರಿ ಫೆಡರರ್ ಈ ಪ್ರಶಸ್ತಿ ಗಳಿಸಿದ್ದರು. ಫೆಡರರ್ ಅಭಿಮಾನಿಗಳ ಫೇವರಿಟ್ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಫೆಡರರ್ ಸತತ 16ನೇ ವರ್ಷ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎಟಿಪಿ ಪ್ರಶಸ್ತಿ ವಿಜೇತರುಗಳು

ಎಟಿಪಿ ವರ್ಲ್ಡ್ ಟೂರ್ ನಂ.1: ನೊವಾಕ್ ಜೊಕೊವಿಕ್

ವರ್ಷದ ಕಮ್‌ಬ್ಯಾಕ್ ಪ್ಲೇಯರ್: ನೊವಾಕ್ ಜೊಕೊವಿಕ್

ಎಟಿಪಿ ವರ್ಲ್ಡ್ ಟೂರ್ ನಂ.1 ಡಬಲ್ಸ್ ಟೀಮ್: ಒಲಿವೆರ್ ಮರಾಚ್ ಹಾಗೂ ಮ್ಯಾಟ್ ಪಾವಿಕ್.

ವರ್ಷದ ಹೊಸ ಆಟಗಾರ ಪ್ರಶಸ್ತಿ: ಅಲೆಕ್ಸ್ ಡಿ ಮಿನೌರ್

ಸ್ಟೆಫನ್ ಎಡ್ಬರ್ಗ್ ಸ್ಪೋರ್ಟ್ಸ್‌ಮ್ಯಾನ್‌ಶಿಪ್ ಅವಾರ್ಡ್: ರಫೆಲ್ ನಡಾಲ್.

ಎಟಿಪಿ ವರ್ಷದ ಕೋಚ್: ಮರಿಯನ್ ವಾಡಾ(ನೊವಾಕ್ ಜೊಕೊವಿಕ್ ಕೋಚ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News