ಹುಷಾರ್.. ನಪುಂಸಕ ಎಂದು ಕರೆಯುವುದು ಮಾನಹಾನಿ!

Update: 2018-11-11 08:20 GMT

ನಾಗ್ಪುರ, ನ.11: ಒಬ್ಬ ವ್ಯಕ್ತಿಯನ್ನು ‘ನಪುಂಸಕ’ ಎಂದು ಕರೆಯುವುದು ಮಾನಹಾನಿಯಾಗುತ್ತದೆ ಹಾಗೂ ಆತನ ಪುರುಷತ್ವದ ಮೇಲೆ ಅದು ಪ್ರತಿಫಲಿಸುತ್ತದೆ ಎಂದು ಬಾಂಬೆ ಹೈಕೋರ್ಟ್‍ನ ನಾಗ್ಪುರ ಪೀಠ ಐತಿಹಾಸಿಕ ತೀರ್ಪು ನೀಡಿದೆ.

ಗಂಡನ ದೂರಿನ ಅನ್ವಯ ಅಪರಾಧ ವಿಚಾರಣೆ ಪ್ರಕ್ರಿಯೆ ಆರಂಭಿಸಿದ ಕ್ರಮವನ್ನು ತಿರಸ್ಕರಿಸುವಂತೆ ಮಹಿಳೆಯೊಬ್ಬಳು ಮಾಡಿಕೊಂಡ ಮನವಿಯನ್ನು ತಳ್ಳಿಹಾಕಿದ ಹೈಕೋರ್ಟ್, "ಅಂತಹ ಪದಬಳಕೆ ಮಾನಹಾನಿಯ ಅಪರಾಧವಾಗುತ್ತದೆ" ಎಂದು ಸ್ಪಷ್ಟಪಡಿಸಿದೆ. ವರದಕ್ಷಿಣೆ, ಮನೆಯೊಳಗೆ ಹಿಂಸೆ ಮತ್ತು ಕಿರುಕುಳದ ಜತೆಗೆ ನಂಪುಸಕತ್ವದ ಕಾರಣ ನೀಡಿ ವಿಚ್ಛೇದನ ಬಯಸುವ ಮಹಿಳೆಯರ ವಿರುದ್ಧ ಕಾನೂನು ಸಮರ ನಡೆಸುವ ಪುರುಷರಿಗೆ ಈ ತೀರ್ಪು ನೆರವಾಗಲಿದೆ.

ಮೇಲ್ನೋಟಕ್ಕೆ ಷಂಡ (ನಪುಂಸಕ) ಎನ್ನುವುದು ವ್ಯಾಕರಣಾತ್ಮಕವಾಗಿ, ಪುರುಷನ ಪುರುಷತ್ವದ ಬಗೆಗಿನ ಪ್ರತಿಕೂಲ ಪದವಾಗುತ್ತದೆ. ಇದು ಆತನನ್ನು ಇತರರು ಭಿನ್ನವಾಗಿ ನೋಡಲು ಕಾರಣವಾಗುತ್ತದೆ. ಇದರ ಅನ್ವಯ ಇಂಥ ಪದ ಬಳಕೆ ಮಾಡುವುದು ಭಾರತೀಯ ದಂಡಸಂಹಿತೆ ಸೆಕ್ಷನ್ 499ರ ಅನ್ವಯ ಮಾನಹಾನಿಕರವಾಗುತ್ತದೆ ಹಾಗೂ ಸೆಕ್ಷನ್ 500ರ ಅನ್ವಯ ಇದಕ್ಕೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ನ್ಯಾಯಮೂರ್ತಿ ಸುನೀಲ್ ಶುರ್ಕೆ ಅವರ ನೇತೃತ್ವದ ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ.

ಮಹಿಳೆ ವಿರುದ್ಧ ಆರಂಭಿಸಿರುವ ಅಪರಾಧ ವಿಚಾರಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಪೀಠ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News