ಫೇಸ್‌ಬುಕ್ ವಿರುದ್ಧ ಮತ್ತೊಂದು ಗಂಭೀರ ಆರೋಪ

Update: 2018-11-11 17:26 GMT

 ಲಂಡನ್,ನ.11: ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್, ಹದಿಹರೆಯದ ಬಾಲಕಿಯರಿಗೆ ಅವರ ಪೇಜ್‌ಗಳಲ್ಲಿ ಮಧ್ಯವಯಸ್ಕ ಪುರುಷರ ‘ಸ್ನೇಹಕ್ಕೆ ಸಲಹೆ’ (ಫ್ರೆಂಡ್ ಸಜೆಶನ್ಸ್)ನೀಡುತ್ತದೆಯೆಂದು ಮಾಧ್ಯಮ  ವರದಿಯೊಂದು ತಿಳಿಸಿದೆ.

  ಫೇಸ್‌ಬುಕ್‌ಗೆ ಸೇರ್ಪಡೆಗೊಳ್ಳುವ 13 ವರ್ಷದಷ್ಟು ಕಿರಿಯ ವಯಸ್ಸಿನ ಹದಿಹರೆಯದ ಬಾಲಕಿಯರಿಗೆ, ಅವರು ಯಾರ ಜೊತೆ ಸ್ನೇಹವನ್ನು ಬೆಳೆಸಿಕೊಳ್ಳಬಹುದೆಂಬ ಈ ಸಾಮಾಜಿಕ ಜಾಲತಾಣವು ಸುಮಾರು 300 ಮಂದಿಯ ಹೆಸರನ್ನು ಸೂಚಿಸುತ್ತದೆ. ಅವುಗಳಲ್ಲಿ ಕೆಲವು ತೆರೆದೆದೆಯ ಭಂಗಿಯಲ್ಲಿರುವ ಮಧ್ಯವಯಸ್ಕ ಪುರುಷರದ್ದಾಗಿವೆ ಎಂದು ಟೆಲಿಗ್ರಾಫ್ ಪತ್ರಿಕೆಯು ಶನಿವಾರ ವರದಿ ಮಾಡಿದೆ.

ಈ ವರದಿಯ ಬೆನ್ನಲ್ಲೇ ಬ್ರಿಟನ್ ಮೂಲದ ಮಕ್ಕಳ ಮೇಲಿನ ಹಿಂಸಾಚಾರ ತಡೆಗಾಗಿನ ರಾಷ್ಟ್ರೀಯ ಸೊಸೈಟಿ (ಎನ್‌ಎಸ್‌ಪಿಸಿಸಿ)ಯು ಹೇಳಿಕೆಯೊಂದನ್ನು ನೀಡಿ, ಫೇಸ್‌ಬುಕ್ ಸಾಮಾಜಿಕ ಜಾಲತಾಣವು, ಮಕ್ಕಳಿಗೆ ಸ್ನೇಹಿತರನ್ನು ಶಿಫಾರಸು ಮಾಡುವುದನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದೆ.

 ‘‘ದುರುದ್ದೇಶ ಹೊಂದಿರುವ ವ್ಯಕ್ತಿಗಳು ಸೋಗು ಹಾಕಿಕೊಂಡು ಮಕ್ಕಳ ಸಾಮಾಜಿಕ ಜಾಲತಾಣಗಳಲ್ಲಿನ ಫ್ರೆಂಡ್‌ ಶಿಪ್ ಗ್ರೂಪ್‌ಗಳಿಗೆ ನುಸುಳುತ್ತಾರೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಲು ಸುಲಭವಾಗುವಂತಹ ಲೈವ್ ಸ್ಟ್ರೀಮಿಂಗ್ ಅಥವಾ ರಹಸ್ಯ ಸೈಟ್‌ಗಳಿಗೆ ಅವರನ್ನು ಸೆಳೆಯುವ ಉದ್ದೇಶವನ್ನು ಹೊಂದಿರುತ್ತಾರೆ’’ ಎಂದು ಆನ್‌ಲೈನ್‌ನಲ್ಲಿ ಮಕ್ಕಳ ಸುರಕ್ಷತೆಗಾಗಿನ ಎನ್‌ಎಸ್‌ಪಿಸಿಸಿಯ ಅಸೋಸಿಯೆಟ್ ವರಿಷ್ಠ ಆ್ಯಂಡಿ ಬ್ಯುರೋಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News