ಮೊಗಾದಿಶು ಸರಣಿ ಸ್ಫೋಟ: ಮೃತರ ಸಂಖ್ಯೆ 53ಕ್ಕೇರಿಕೆ

Update: 2018-11-11 17:24 GMT

ಮೊಗಾದಿಶು,ನ.11: ಸೊಮಾಲಿಯದ ರಾಜಧಾನಿ ಮೊಗಾದಿಶುವಿನ ಹೊಟೇಲೊಂದರ ಹೊರಗೆ ಶುಕ್ರವಾರ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 53ಕ್ಕೇರಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

 ಗಾಯಾಳುಗಳಲ್ಲಿ ಹಲವರ ಪರಿಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆಯಿದೆಯೆಂದು ಸೊಮಾಲಿಯಾದ ಹಿರಿಯ ಪೊಲೀಸ್ ಅಧಿಕಾರಿ ಕ್ಯಾಪ್ಟನ್ ಮುಹಮ್ಮದ್ ಹುಸೈನ್ ತಿಳಿಸಿದ್ದಾರೆ.

  ಮೊಗಾದಿಶುವಿನ ಕೇಂದ್ರ ಭಾಗದಲ್ಲಿರುವ ಶಹಾಫಿ ಹೊಟೇಲ್ ಹಾಗೂ ಕ್ರಿಮಿನಲ್ ತನಿಖಾ ಇಲಾಖೆ (ಸಿಐಡಿ) ಕಾರ್ಯಾಲಯದ ಸಮೀಪ ಎರಡು ಕಾರ್‌ ಬಾಂಬ್‌ಗಳು ಸ್ಫೋಟಿಸಿತ್ತು. ಇದಾದ ಬೆನ್ನಲ್ಲೇ ನಗರದ ಜನದಟ್ಟಣೆಯ ರಸ್ತೆಯಲ್ಲಿಯೂ ಬಾಂಬೊಂದು ಸ್ಫೋಟಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ಶಂಕಿಸಿದ್ದಾರೆ.ಗಾಯಾಳುಗಳ ರಕ್ಷಣೆಗೆ ವೈದ್ಯಕೀಯ ಕಾರ್ಯಕರ್ತರು ಧಾವಿಸಿದ ಸಂದರ್ಭದಲ್ಲಿ ನಾಲ್ಕನೆಯ ಬಾಂಬ್ ಸ್ಪೋಟಿಸಿತ್ತು.

ಸೊಮಾಲಿಯಾದ ತೀವ್ರವಾದಿ ಸಂಘಟನೆ ಅಲ್‌ ಶದಾಬ್ ಈ ತ್ರಿವಳಿ ಸ್ಫೋಟದ ಹೊಣೆ ಹೊತ್ತುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News