ಟಾಗೋರ್ ಸ್ಥಾಪಿಸಿದ ಕಲಾಭವನಕ್ಕೆ ನೂರರ ಸಂಭ್ರಮ

Update: 2018-11-11 17:55 GMT

ಕೋಲ್ಕತಾ, ನ.11: ರವೀಂದ್ರನಾಥ ಟಾಗೋರರು ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾನಿಲಯದ ಲಲಿತಕಲಾ ಶಾಲೆ ಕಲಾಭವನಕ್ಕೆ ನೂರು ವರ್ಷವಾಗಿರುವ ಹಿನ್ನೆಲೆಯಲ್ಲಿ ವರ್ಷವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನವೆಂಬರ್ 29ರಂದು ನೂರರ ಸಂಭ್ರಮಾಚರಣೆಗೆ ಚಾಲನೆ ದೊರಕಲಿದೆ ಎಂದು ಕಲಾಭವನದ ಪ್ರಾಂಶುಪಾಲ ಗೌತಮ್ ದಾಸ್ ತಿಳಿಸಿದ್ದಾರೆ.

  ವರ್ಷವಿಡೀ ನಡೆಯುವ ಸಂಭ್ರಮಾಚರಣೆಯ ಅಂಗವಾಗಿ ಹೊಸದಿಲ್ಲಿಯ ಲಲಿತ ಕಲಾ ಅಕಾಡಮಿ ಆಯೋಜಿಸಿರುವ ಅಂತರಾಷ್ಟ್ರೀಯ ಕಲಾಮೇಳ 2019ರ ಫೆಬ್ರವರಿಯಲ್ಲಿ ಶಾಂತಿನಿಕೇತನದಲ್ಲಿ ನಡೆಯಲಿದೆ. ಅಲ್ಲದೆ ಹೊಸದಿಲ್ಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಶಾಂತಿನಿಕೇತನ ಕಲಾಶಾಲೆಯಲ್ಲಿ ರಚಿಸಲಾಗಿರುವ ಕಲಾಕೃತಿಗಳ ಪ್ರದರ್ಶನ 2019ರ ಉತ್ತರಾರ್ಧದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News