ಶಂಕಾಸ್ಪದ ಬೌಲಿಂಗ್ ಸುಳಿಯಲ್ಲಿ ಶ್ರೀಲಂಕಾ ಸ್ಪಿನ್ನರ್ ಧನಂಜಯ

Update: 2018-11-11 18:31 GMT

ಕೊಲಂಬೊ, ನ.11: ಶ್ರೀಲಂಕಾದ ಆಫ್-ಸ್ಪಿನ್ನರ್ ಅಕಿಲ ಧನಂಜಯ ಶಂಕಾಸ್ಪದ ಬೌಲಿಂಗ್ ಶೈಲಿಯ ಸುಳಿಗೆ ಸಿಲುಕಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಧನಂಜಯ ಬೌಲಿಂಗ್ ಶೈಲಿಯ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಅಂಪೈರ್‌ಗಳು ಈ ಕುರಿತು ವರದಿ ನೀಡಿದ್ದಾರೆ.

‘‘ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಶಂಕಾಸ್ಪದ ಬೌಲಿಂಗ್ ಶೈಲಿಗೆ ಸಂಬಂಧಿಸಿ ಐಸಿಸಿ ಪ್ರಕ್ರಿಯೆ ಅಡಿ ಧನಂಜಯ ಅವರ ಬೌಲಿಂಗ್ ಶೈಲಿಯನ್ನು ಪರಿಶೀಲಿಸಲಾಗುತ್ತದೆ’’ ಎಂದು ಐಸಿಸಿ ತಿಳಿಸಿದೆ.

25ರ ಹರೆಯದ ಧನಂಜಯ ಶುಕ್ರವಾರ ನಾಲ್ಕೇ ದಿನಗಳಲ್ಲಿ ಕೊನೆಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 184 ರನ್ ನೀಡಿ ಕೇವಲ 2 ವಿಕೆಟ್ ಪಡೆದಿದ್ದರು. ಈ ಪಂದ್ಯವನ್ನು ಶ್ರೀಲಂಕಾ 211 ರನ್‌ಗಳಿಂದ ಸೋತಿತ್ತು. ಪಂದ್ಯದ ಅಧಿಕಾರಿಗಳು ನೀಡಿರುವ ವರದಿಯನ್ನು ಶ್ರೀಲಂಕಾ ಟೀಮ್ ಮ್ಯಾನೇಜ್‌ಮೆಂಟ್‌ಗೆ ಹಸ್ತಾಂತರಿಸಲಾಗಿದೆ. ಇದರಲ್ಲಿ ಧನಂಜಯ ಅವರ ಬೌಲಿಂಗ್ ಶೈಲಿಯ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಧನಂಜಯ ಇನ್ನೆರಡು ವಾರಗಳಲ್ಲಿ ಪರೀಕ್ಷೆಗೆ ಒಳಗಾಗಬೇಕಾಗಿದೆ. ಈ ಅವಧಿಯಲ್ಲಿ ಅವರು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಬಹುದು ಎಂದು ಐಸಿಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News