ಪ್ರೊ ಕಬಡ್ಡಿ: ಡೆಲ್ಲಿ ಜಯಭೇರಿ

Update: 2018-11-11 18:37 GMT

ಮುಂಬೈ, ನ.11: ಪ್ರೊ ಕಬಡ್ಡಿ ಲೀಗ್‌ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 40-29 ಅಂತರದಿಂದ ಮಣಿಸಿತು.

ವರ್ಲಿಯ ಎನ್‌ಎಸ್‌ಸಿಐ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನವೀನ್ ಕುಮಾರ್(10 ಅಂಕ),ಮೀರಾಜ್ ಶೇಖ್(9 ಅಂಕ) ಹಾಗೂ ಚಂದ್ರನ್ ರಂಜಿತ್(8)ಡೆಲ್ಲಿ ಪರ ವೀರೋಚಿತ ಪ್ರದರ್ಶನ ನೀಡಿದರು. ಡೆಲ್ಲಿ ಪರ ಜೋಗಿಂದರ್ ನರ್ವಾಲ್(5)ಅಗ್ರ ಡಿಫೆಂಡರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News