ಚಾಂಪಿಯನ್ ವಿದರ್ಭ 245/8

Update: 2018-11-12 18:32 GMT

ನಾಗ್ಪುರ, ನ.12: ಹಾಲಿ ಚಾಂಪಿಯನ್ ವಿದರ್ಭ ತಂಡ ಮೊದಲ ದಿನವಾದ ಸೋಮವಾರ ಕರ್ನಾಟಕ ವಿರುದ್ಧ ಎ ಗುಂಪಿನ ಪಂದ್ಯದಲ್ಲಿ 87 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 245 ರನ್ ಕಲೆ ಹಾಕಿದೆ.

ಟಾಸ್ ಜಯಿಸಿದ ವಿದರ್ಭ ನಾಯಕ ಫೈಝ್ ಫಝಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿದ ಕರ್ನಾಟಕದ ವೇಗಿಗಳಾದ ಅಭಿಮನ್ಯು ಮಿಥುನ್(3-32) ಹಾಗೂ ಸುಚಿತ್(3-25)ವಿದರ್ಭವನ್ನು ಮೊದಲ ದಿನದಾಟದಲ್ಲಿ 8 ವಿಕೆಟ್‌ಗೆ 245 ರನ್‌ಗೆ ನಿಯಂತ್ರಿಸಿದರು. ವಿದರ್ಭ ತಂಡದ ಪರ ಗಣೇಶ್ ಸತೀಶ್ ಸರ್ವಾಧಿಕ ಸ್ಕೋರ್(57) ಗಳಿಸಿದರು. ಕರ್ನಾಟಕ ಮೂಲದ ಗಣೇಶ್ 141 ಎಸೆತಗಳ ತಾಳ್ಮೆಯ ಇನಿಂಗ್ಸ್‌ನಲ್ಲಿ 7 ಬೌಂಡರಿ ಬಾರಿಸಿ ಸುಚಿತ್‌ಗೆ ವಿಕೆಟ್ ಒಪ್ಪಿಸಿದರು. ಎಸ್‌ಬಿ ವಾಘ್(37) ಹಾಗೂ ಲಲಿತ್ ಯಾದವ್(7) ಕ್ರೀಸ್ ಕಾಯ್ದುಕೊಂಡಿದ್ದಾರೆ. ಹಿರಿಯ ಆಟಗಾರ ವಸೀಂ ಜಾಫರ್(41), ವಿಕೆಟ್‌ಕೀಪರ್ ವಾಡ್ಕರ್(31)ಹಾಗೂ ನಾಯಕ ಫೈಝಲ್(22)ಎರಡಂಕೆಯ ಸ್ಕೋರ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

►ವಿದರ್ಭ: ಮೊದಲ ಇನಿಂಗ್ಸ್‌ನಲ್ಲಿ 245/8

(ಗಣೇಶ್ ಸತೀಶ್ 57,ಜಾಫರ್ 41, ವಾಘ್ ಅಜೇಯ 37, ಸುಚಿತ್ 3-25, ಮಿಥುನ್ 3-32)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News