ಐಪಿಎಲ್‌ನಲ್ಲಿ ಆಡಲು ಕಿವೀಸ್ ಆಟಗಾರರಿಗೆ ಅವಕಾಶ

Update: 2018-11-12 18:41 GMT

ಮುಂಬೈ, ನ.12: ಮಹತ್ವದ ಬೆಳವಣಿಗೆಯೊಂದರಲ್ಲಿ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಯು ತನ್ನ ಎಲ್ಲ ಆಟಗಾರರಿಗೆ ಮುಂಬರುವ ಐಪಿಎಲ್ ಟೂರ್ನಿಯ ಎಲ್ಲ ಪಂದ್ಯಗಳಲ್ಲಿ ಆಡಲು ಅವಕಾಶ ನೀಡಿದೆ.

ಐಪಿಎಲ್ ಆರಂಭದಿಂದ ಕೊನೆಯ ತನಕ ಎಲ್ಲ ಆಟಗಾರರಿಗೆ ಅವಕಾಶ ನೀಡಲು ನ್ಯೂಝಿಲೆಂಡ್ ಕ್ರಿಕೆಟ್ ನಿರ್ಧರಿಸಿದೆ. ನಮ್ಮ ಆಟಗಾರರು ಸಾಧ್ಯವಾದಷ್ಟು ವಿಶ್ವದ ಎಲ್ಲ ಕಡೆ ಆಡಲು ಅವಕಾಶ ನೀಡಲು ಬಯಸಿದ್ದೇವೆ’’ ಎಂದು ನ್ಯೂಝಿಲೆಂಡ್ ಕ್ರಿಕೆಟ್ ಅಧಿಕಾರಿ ಜೇಮ್ಸ್ ವೇರ್ ತಿಳಿಸಿದ್ದಾರೆ.

ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಮುಂದಿನ ವರ್ಷದ ಮೇ ಅಂತ್ಯದಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಭಾಗವಹಿಸಲು ತನ್ನ ಆಟಗಾರರಿಗೆ ಅವಕಾಶ ನೀಡದಿರಲು ನಿರ್ಧರಿಸಿದೆ ಎಂಬ ವರದಿಯ ಬೆನ್ನಲ್ಲೇ ನ್ಯೂಝಿಲೆಂಡ್ ಕ್ರಿಕೆಟ್ ಈ ಘೋಷಣೆ ಮಾಡಿದೆ. ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ವೇಗಿಗಳಾದ ಟಿಮ್ ಸೌಥಿ, ಆ್ಯಡಮ್ ಮಿಲ್ನೆ, ಟ್ರೆಂಟ್ ಬೌಲ್ಟ್ ಹಾಗೂ ಮಿಚೆಲ್ ಮೆಕ್ಲಿನಘನ್ ಶ್ರೀಮಂತ ಟ್ವೆಂಟಿ-20 ಲೀಗ್‌ನಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News