ಕಾಶ್ಮೀರಕ್ಕೆ ಪಾಕಿಸ್ತಾನ ಬೇಡಿಕೆ ಇಡಬಾರದು : ಅಫ್ರಿದಿ

Update: 2018-11-15 04:32 GMT

ಲಂಡನ್, ನ.14: ಕಾಶ್ಮೀರಕ್ಕೆ ಪಾಕಿಸ್ತಾನ ಬೇಡಿಕೆ ಇಡಬಾರದು. ಕಾಶ್ಮೀರವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿ ತಿಳಿಸಿದರು.

ಲಂಡನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ನಾಲ್ಕು ಪ್ರಾಂತ್ಯಗಳನ್ನು ನಿಭಾಯಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಪಾಕಿಸ್ತಾನಕ್ಕೆ ಕಾಶ್ಮೀರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದು  ಪ್ರಶ್ನಿಸಿದರು. ಪಾಕಿಸ್ತಾನ ದಲ್ಲಿ ಒಗ್ಗಟ್ಟು ಇಲ್ಲ.  ಪ್ರತ್ಯೇಕವಾದಿಗಳ ಕೈಯಿಂದ ದೇಶವನ್ನು ಮುಕ್ತಗೊಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಪಾಕಿಸ್ತಾನಕ್ಕೆ ಕಾಶ್ಮೀರದ  ಆವಶ್ಯಕತೆ ಇಲ್ಲ. ಇದೇ ವೇಳೆ ಭಾರತಕ್ಕೂ ಕಾಶ್ಮೀರವನ್ನು ನೀಡಬೇಕಾಗಿಲ್ಲ. ಕಾಶ್ಮೀರ ಒಂದು ದೇಶವಾಗಿ ಬೆಳೆಯಲಿ. ಅಲ್ಲಿ ಜನರು ಸಾಯುತ್ತಿದ್ದಾರೆ. ಅವರನ್ನು ಸಾಯಲು ಬಿಡಬಾರದು.  ಅವರು  ಬದುಕಬೇಕು ಮಾನವೀಯತೆ ಉಳಿಯಲಿ.  ಜನರು ಸಾಯುತ್ತಿರುವುದನ್ನು ನೋಡುವಾಗ ಮನಸ್ಸಿಗೆ ನೋವಾಗುತ್ತದೆ ಎಂದು ಅಫ್ರಿದಿ ನುಡಿದರು.

ಕಾಶ್ಮೀರ ಮತ್ತು ಭಾರತದ ಇತರ ಕಡೆಗಳಲ್ಲಿ ಭಯೋತ್ಪಾದಕ ಚಟುವಟೆಕೆಗಳಿಗೆ ಪಾಕಿಸ್ತಾನ ಪ್ರಾಯೋಕತ್ವ ನೀಡುತ್ತಿದೆ. ಪಾಕಿಸ್ತಾನ ಮೂಲದ ಹಲವು ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ಸಕ್ರೀಯವಾಗಿದೆ. ಇಂತಹ ಸಂಘಟನೆಗಳ ನಾಯಕರು ಭಾರತದ ನಗರಗಳಲ್ಲಿ ಓಡಾಡುತ್ತಿರುವುದನ್ನು ನಾವು ನೋಡಬಹುದಾಗಿದೆ ಎಂದು ಅಫ್ರಿದಿ ಆರೋಪಿಸಿದರು. . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News