ತಮಿಳ್-ಹರ್ಯಾಣ ಪಂದ್ಯ 32-32ರಿಂದ ಡ್ರಾ

Update: 2018-11-14 18:31 GMT

ಅಹ್ಮದಾಬಾದ್, ನ.14: ತಮಿಳ್ ತಲೈವಾಸ್ ಹಾಗೂ ಹರ್ಯಾಣ ಸ್ಟೀಲರ್ಸ್ ನಡುವೆ ಬುಧವಾರ ಇಲ್ಲಿ ನಡದ ಪ್ರೊ ಕಬಡ್ಡಿ ಲೀಗ್ ಪಂದ್ಯ 32-32 ಅಂತರದಿಂದ ಡ್ರಾನಲ್ಲಿ ಕೊನೆಗೊಂಡಿದೆ.

ತಮಿಳ್ ಪರ ಕನ್ನಡಿಗ ಸುಕೇಶ್ ಹೆಗ್ಡೆ 7 ಅಂಕ ಗಳಿಸಿದರೆ, ಅಜಯ್ ಠಾಕೂರ್ 6 ಅಂಕ ಗಳಿಸಿದರು. ಒಟ್ಟು 14 ಅಂಕ ಗಳಿಸಿದ ವಿಕಾಸ್ ಹರ್ಯಾಣ ತಂಡದ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಈ ಋತುವಿನಲ್ಲಿ 2ನೇ ಬಾರಿ ಪಂದ್ಯವೊಂದು ಟೈ ಆಗಿದೆ.

ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ತಂಡ ಬೆಂಗಳೂರು ಬುಲ್ಸ್ ತಂಡವನ್ನು 32-29 ಅಂತರದಿಂದ ರೋಚಕವಾಗಿ ಮಣಿಸಿದೆ.

ಮುಂಬಾ ಪರ ದರ್ಶನ್ 9 ಹಾಗೂ ಸುರಿಂದರ್ ಸಿಂಗ್ 5 ಅಂಕ ಗಳಿಸಿದ್ದಾರೆ. ಬೆಂಗಳೂರು ಪರ ಕುಮಾರದ್ವಯರಾದ ಪವನ್ ಹಾಗೂ ರೋಹಿತ್ ಕ್ರಮವಾಗಿ 8 ಹಾಗೂ 6 ಅಂಕ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News