ಫ್ಲಿಪ್‌ಕಾರ್ಟ್ ಸಿಇಒ ಬಿನ್ನಿ 'ವೈಯಕ್ತಿಕ ದುರ್ನಡತೆ' ಪ್ರಕರಣಕ್ಕೆ ಹೊಸ ಟ್ವಿಸ್ಟ್

Update: 2018-11-15 05:51 GMT

ಹೊಸದಿಲ್ಲಿ, ನ.15: "ಬಿನ್ನಿ ಬನ್ಸಾಲ್ ಮತ್ತು ಆರೋಪ ಮಾಡಿದ ಮಹಿಳೆಯ ನಡುವೆ ಇದ್ದದ್ದು ಒಪ್ಪಿತ ಸಂಬಂಧ" ಎಂದು ಫ್ಲಿಪ್‌ಕಾರ್ಟ್ ಸಹಸಂಸ್ಥಾಪಕ ಬಿನ್ನಿ ಬನ್ಸಾಲ್ ವಿರುದ್ಧದ "ಗಂಭೀರ ವೈಯಕ್ತಿಕ ದುರ್ನಡತೆ" ಬಗ್ಗೆ ನಡೆಸಿದ ಸ್ವತಂತ್ರ ತನಿಖೆಯಿಂದ ತಿಳಿದುಬಂದಿದೆ.

ತನಿಖೆ ವಿವರಗಳ ಬಗ್ಗೆ ಮಾಹಿತಿ ಇರುವ ಇಬ್ಬರ ಹೇಳಿಕೆಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ಈ ಕುರಿತು ವರದಿ ಮಾಡಿದೆ. ಆರೋಪವನ್ನು ನಿರಾಕರಿಸಿದರೂ, ತನಿಖೆ ಹಿನ್ನೆಲೆಯಲ್ಲಿ ಬನ್ಸಾಲ್ (37) ತಕ್ಷಣ ರಾಜೀನಾಮೆ ನೀಡಿದ್ದರು.

ಲೈಂಗಿಕ ಕಿರುಕುಳದ ಆರೋಪ ಜುಲೈನಲ್ಲಿ ಬಂದಿದ್ದು, ಫ್ಲಿಪ್‌ಕಾರ್ಟ್ ಉದ್ಯೋಗಿ ಈ ದೂರು ನೀಡಿದ್ದರು ಎಂದು ಒಬ್ಬರು ಬಹಿರಂಗಪಡಿಸಿದ್ದಾರೆ. ಆದರೆ ಆ ಮಹಿಳೆ ಕಂಪೆನಿಯಲ್ಲಿ ಕೆಲಸವನ್ನೇ ಮಾಡಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.

"ಬಿನ್ನಿ ವಿರುದ್ಧದ ಆರೋಪಗಳಿಗೆ ಪೂರಕವಾದ ಯಾವ ಪುರಾವೆಯೂ ತನಿಖೆ ವೇಳೆ ಸಿಕ್ಕಿಲ್ಲ. ಬದಲಿಗೆ ತೀರ್ಪಿನಲ್ಲಿ ಹಲವು ಲೋಪಗಳು ಪತ್ತೆಯಾಗಿವೆ. ಅದರಲ್ಲೂ ಮುಖ್ಯವಾಗಿ ಆ ಪರಿಸ್ಥಿತಿಯಲ್ಲಿ ಬಿನ್ನಿ ಹೇಗೆ ಸ್ಪಂದಿಸಿದರು ಎಂಬ ಬಗ್ಗೆ ಪಾರದರ್ಶಕತೆ ಇರಲಿಲ್ಲ" ಎಂದು ವಾಲ್‌ಮಾರ್ಟ್ ಹೇಳಿಕೆ ನೀಡಿದೆ.

ವಾಲ್‌ಮಾರ್ಟ್ 16 ಶತಕೋಟಿ ಡಾಲರ್ ಮೌಲ್ಯದ ಭಾರತೀಯ ಕಂಪೆನಿಯ ಬಹುತೇಕ ಷೇರುಗಳನ್ನು ಆಗಸ್ಟ್‌ನಲ್ಲಿ ಖರೀದಿಸಿತ್ತು. ಇದು ಬನ್ಸಾಲ್ ಅವರ ನಿವ್ವಳ ಮೌಲ್ಯವನ್ನು 100 ಕೋಟಿ ಡಾಲರ್‌ಗಿಂತ ಮೇಲಕ್ಕೆ ಒಯ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News