ಭಾರತದಲ್ಲಿ ಫಾರ್ಮುಲಾ ಒನ್ ಆತಿಥ್ಯದ ಬದಲಿಗೆ ಹೆಚ್ಚು ಶಾಲೆ-ಮನೆಗಳನ್ನು ಕಟ್ಟಬೇಕು: ಹ್ಯಾಮಿಲ್ಟನ್

Update: 2018-11-15 17:41 GMT

ಲಂಡನ್, ನ.15: ''ಭಾರತದಂತಹ ದೇಶ ಫಾರ್ಮುಲಾ ಒನ್ ಟ್ರಾಕ್‌ಗಳ ನಿರ್ಮಾಣಕ್ಕೆ ವ್ಯಯಿಸುವ ಭಾರೀ ಹಣವನ್ನು ಮನೆಗಳು ಹಾಗೂ ಶಾಲೆಗಳ ನಿರ್ಮಾಣಕ್ಕೆ ವ್ಯಯಿಸಬೇಕು’’ ಎಂದು ಐದು ಬಾರಿಯ ವಿಶ್ವ ಚಾಂಪಿಯನ್ ಲೂವಿಸ್ ಹ್ಯಾಮಿಲ್ಟನ್ ಸಲಹೆ ನೀಡಿದ್ದಾರೆ.

ಭಾರತ, ಕೊರಿಯಾ ಹಾಗೂ ಟರ್ಕಿಯಲ್ಲಿ ಎಫ್-1 ರೇಸ್ ಆಯೋಜಿಸುವುದನ್ನು ಹ್ಯಾಮಿಲ್ಟನ್ ಪ್ರಶ್ನಿಸಿದ್ದಾರೆ. ಇಲ್ಲಿ ಹೆಚ್ಚು ಕಾಲ ಈ ಕ್ರೀಡೆ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

 ಭಾರತದ ಬಗ್ಗೆ ಹ್ಯಾಮಿಲ್ಟನ್ ನೀಡಿರುವ ಹೇಳಿಕೆ ಕೆಲವು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿದ ಹ್ಯಾಮಿಲ್ಟನ್,‘‘ಭಾರತ ಕುರಿತು ನಾನು ನೀಡಿರುವ ಹೇಳಿಕೆಯಿಂದ ಕೆಲವರಿಗೆ ನೋವಾಗಿದೆ. ಭಾರತ ವಿಶ್ವದಲ್ಲಿ ಒಂದು ಬಹಳ ಸುಂದರ ರಾಷ್ಟ್ರ. ಅಲ್ಲಿನ ಸಂಸ್ಕೃತಿ ಅದ್ಭುತ. ನಾನು ಅಲ್ಲಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಹಾಗೆಯೇ ಬಡತನ ಕೂಡ ಸಾಕಷ್ಟಿದೆ. ಎಫ್-1ಕ್ಕೆ ಬಳಸುವ ಹಣವನ್ನು ಬಡವರಿಗೆ ಶಾಲೆ ಅಥವಾ ಮನೆಗಳ ನಿರ್ಮಾಣಕ್ಕೆ ವಿನಿಯೋಗಿಸಬೇಕೆಂದು ನನ್ನ ಅಭಿಪ್ರಾಯ’’ ಎಂದರು.

ಭಾರತ 2011ರಿಂದ 2013ರ ತನಕ ಇಂಡಿಯನ್ ಗ್ರಾನ್‌ಪ್ರಿ ಆಯೋಜಿಸಿತ್ತು. ರೆಡ್‌ಬುಲ್‌ನ ಸೆಬಾಸ್ಟಿಯನ್ ವೆಟೆಲ್ ಮೂರು ಬಾರಿ ಪ್ರಶಸ್ತಿಗಳನ್ನು ಜಯಿಸಿದ್ದರು. 3 ಆವೃತ್ತಿಯ ಬಳಿಕ ತೆರಿಗೆ ವಿಚಾರ ಹಾಗೂ ಹಣಕಾಸು ಸಮಸ್ಯೆಯಿಂದಾಗಿ ಟೂರ್ನಿಯನ್ನು ರದ್ದುಪಡಿಸಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News