ಎಟಿಪಿ ಫೈನಲ್ಸ್: ಝ್ವೆರೆವ್ ವಿರುದ್ಧ ಜೊಕೊವಿಕ್‌ಗೆ ಜಯ

Update: 2018-11-15 18:58 GMT

ಲಂಡನ್, ನ.15: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಬುಧವಾರ ನಡೆದ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯಲ್ಲಿ ಜರ್ಮನಿಯ ಯುವ ಆಟಗಾರನ ವಿರುದ್ಧ ಜಯಭೇರಿ ಬಾರಿಸಿದರು. 76 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಜೊಕೊವಿಕ್ ಆರಡಿ, ಆರು ಇಂಚು ಎತ್ತರದ 21ರ ಹರೆಯದ ಝ್ವೆರೆವ್ ವಿರುದ್ಧ 6-4, 6-1 ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ಗೆಲುವಿನೊಂದಿಗೆ ಜೊಕೊವಿಕ್ ಅಂತಿಮ ನಾಲ್ಕರ ಹಂತಕ್ಕೆ ತನ್ನ ಸ್ಥಾನವನ್ನು ಖಚಿತಪಡಿಸಿದ್ದಾರೆ.

2ನೇ ಶ್ರೇಯಾಂಕದ ಹಾಗೂ ಆರು ಬಾರಿ ಎಟಿಪಿ ಫೈನಲ್ಸ್ ಪ್ರಶಸ್ತಿ ವಿಜೇತ ರೋಜರ್ ಫೆಡರರ್ ಸೆಮಿ ಫೈನಲ್‌ಗೆ ತಲುಪಬೇಕಾದರೆ ತನ್ನ ಕೊನೆಯ ರೌಂಡ್ ರಾಬಿನ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ಕೇವಿನ್ ಆ್ಯಂಡರ್ಸನ್ ವಿರುದ್ಧ ನೇರ ಸೆಟ್‌ಗಳಿಂದ ಗೆಲ್ಲಬೇಕಾದ ಒತ್ತಡದಲ್ಲಿದ್ದಾರೆ. ಟೂರ್ನಮೆಂಟ್‌ನ ಮೊದಲ ದಿನವಾದ ರವಿವಾರ ಜಪಾನ್‌ನ ಕಿ ನಿಶಿಕೊರಿ ವಿರುದ್ಧ ಸೋತಿದ್ದ ಫೆಡರರ್ ಮಂಗಳವಾರ ನಡೆದ ಪಂದ್ಯದಲ್ಲಿ ಆಸ್ಟ್ರೀಯದ ಡೊಮಿನಿಕ್ ಥೀಮ್‌ರನ್ನು 6-2, 6-3 ನೇರ ಸೆಟ್‌ಗಳಿಂದ ಸೋಲಿಸಿ ಸೆಮಿ ಫೈನಲ್ ತಲುಪುವ ಆಸೆಯನ್ನು ಜೀವಂತವಾಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News