ಅಲೋಕ್ ವರ್ಮಾ ವಿರುದ್ಧದ ಸಿವಿಸಿ ವರದಿಗೆ ಸುಪ್ರೀಂ ಕೋರ್ಟ್ ‘ಮಿಶ್ರ ಪ್ರತಿಕ್ರಿಯೆ’

Update: 2018-11-16 06:59 GMT

ಹೊಸದಿಲ್ಲಿ, ನ.16: ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಕೇಂದ್ರ ಜಾಗೃತ ಆಯೋಗ ನೀಡಿರುವ ವರದಿಗೆ ನವೆಂಬರ್ 19ರೊಳಗಾಗಿ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾರಿಗೆ ತಿಳಿಸಿದೆ.

ವರದಿಯನ್ನು ಅಲೋಕ್ ವರ್ಮಾರಿಗೆ ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಹಾಗು ವರದಿಯ ರಹಸ್ಯ ಕಾಪಾಡುವಂತೆ ಸಿವಿಸಿಗೆ ಇದೇ ಸಂದರ್ಭ ಸೂಚನೆ ನೀಡಿದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯ ದಿನಾಂಕವನ್ನು ನವೆಂಬರ್ 20ಕ್ಕೆ ನಿಗದಿಪಡಿಸಿತು.

ವರ್ಮಾ ಬಗ್ಗೆ ಸಿವಿಸಿ ನೀಡಿರುವ ವರದಿ ಕೆಲವೊಂದು ಕಡೆ ‘ಪೂರಕ’ವಾಗಿದ್ದರೆ, ಕೆಲವೊಂದು ಆರೋಪಗಳಲ್ಲಿ ‘ಅಷ್ಟೇನೂ ಪೂರಕವಾಗಿಲ್ಲ’ ಹಾಗು ಇನ್ನೂ ಕೆಲವು ಆರೋಪಗಳಲ್ಲಿ ‘ಸಂಪೂರ್ಣವಾಗಿ ಪೂರಕವಾಗಿಲ್ಲ” ಎಂದು ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News