ಕಿಲೋಗ್ರಾಂ ಮಾಪನ ವಿಧಾನಕ್ಕೆ ಇನ್ನು ಹೊಸ ವ್ಯಾಖ್ಯಾನ

Update: 2018-11-17 05:52 GMT

ವರ್ಸೈಲ್ಸ್,ನ.17 : ಪ್ಯಾರಿಸ್ ನಲ್ಲಿ ಮೊದಲ ಬಾರಿಗೆ ಕಿಲೋಗ್ರಾಂ ಅನ್ನು ಒಂದು ಲೋಹದ ಗಟ್ಟಿ ಮೂಲಕ ವ್ಯಾಖ್ಯಾನಿಸಿದ 130 ವರ್ಷಗಳ ನಂತರ ವಿಜ್ಞಾನಿಗಳು ಬದಲಾವಣೆಗೆ ಮತ ನೀಡಿದ್ದು  ತೂಕವನ್ನು  ಮಾಪನ ಮಾಡುವ ವಿಧಾನವನ್ನು ಬದಲಾಯಿಸುವ ಹೊಸ ವ್ಯವಸ್ಥೆಗೆ  ಹಸಿಸು ನಿಶಾನೆ ನೀಡಿದ್ದಾರೆ.

ಶುಕ್ರವಾರ ವರ್ಸೈಲ್ಸ್ ನಗರದಲ್ಲಿ ನಡೆದ ತೂಕ ಮತ್ತು ಮಾಪನ ಸಾಮಾನ್ಯ ಸಮ್ಮೇಳನದಲ್ಲಿ ಐತಿಹಾಸಿಕ ಮತದಾನದ ಮೂಲಕ ಕಿಲೋಗ್ರಾಂ ಅನ್ನು ಇನ್ನು ಮುಂದೆ ಇಂಟರ್ ನ್ಯಾಷನಲ್ ಪ್ರೊಟೋಟೈಪ್ ಕಿಲೋಗ್ರಾಂ (ಐಪಿಕೆ) 1889ರಲ್ಲಿ  ತಯಾರಿಸಲಪಟ್ಟ ಪ್ಲ್ಯಾಟಿನಂ ಲೋಹದ ಸಿಲಿಂಡರ್, ಮೂಲಕ ವ್ಯಾಖ್ಯಾನ ಮಾಡಲಾಗುವುದಿಲ್ಲ ಎಂದು ತೀರ್ಮಾನಿಸಲಾಗಿದ್ದು ಅದರ ಬದಲಿಗೆ  ಖ್ವಾಂಟಂ ಜಗತ್ತಿನಲ್ಲಿ ಆಳವಾಗಿ ಬೇರೂರಿರುವ ಪ್ಲಾಂಕ್ಸ್  ಕಾನ್‍ಸ್ಟಂಟ್ ಮೂಲಕ  ವ್ಯಾಖ್ಯಾನಿಸಲಾಗುವುದು ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು  ಈ ನಿಟ್ಟಿನಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿರುವ  ಅಮೆರಿಕಾದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಸ್ಟಾಂಡಡ್ರ್ಸ್ ಎಂಡ್ ಟೆಕ್ನಾಲಜಿ ಇಲ್ಲಿನ ಭೌತಶಾಸ್ತ್ರಜ್ಷ ಸ್ಟೀಫನ್ ಶ್ಲಮ್ಮಿಂಗರ್ ಹೇಳಿದ್ದಾರೆ.

ಈ ಹೊಸ ವ್ಯವಸ್ಥೆ ಐಪಿಕೆಗೆ ತಿಲಾಂಜಲಿ ನೀಡಿ  ಕಿಬ್ಬಲ್ ಬ್ಯಾಲೆನ್ಸ್ ಎಂಬ  ಯಂತ್ರದ ಮೂಲಕ ತೂಕವನ್ನು ಮಾಪನ ಮಾಡಲಿದೆ. ಇಲ್ಲಿ ಖ್ವಾಂಟಂ ಇಲೆಕ್ಟ್ರಿಕ್ ಎಫೆಕ್ಟ್ ಬಳಕೆಯಾಗುವುದಲ್ಲದೆ ಇವುಗಳನ್ನು ಇಬ್ಬರು ನೋಬೆಲ್ ಪ್ರಶಸ್ತಿ ವಿಜೇತರಾದ ಬ್ರಿಯಾನ್ ಜೋಸೆಫ್ಸನ್ ಹಾಗೂ ಕ್ಲಾವ್ಸ್ ವೊನ್ ಕ್ಲಿಟ್ಝಿಂಗ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News