1971ರ ಭಾರತ-ಪಾಕಿಸ್ತಾನ ಯುದ್ದದ ಹೀರೊ ಬ್ರಿಗೇಡಿಯರ್ ಚಂದ್‌ಪೂರಿ ನಿಧನ

Update: 2018-11-17 06:22 GMT

ಚಂಡೀಗಡ, ನ.17: ಭಾರತ-ಪಾಕಿಸ್ತಾನದ ನಡುವೆ 1971ರಲ್ಲಿ ನಡೆದ ಯುದ್ದದ ಹೀರೊ ಬ್ರಿಗೇಡಿಯರ್ ಕುಲ್‌ದೀಪ್ ಸಿಂಗ್ ಚಂದ್‌ಪೂರಿ ಶನಿವಾರ ಬೆಳಗ್ಗೆ ಕೊನೆಯುಸಿರೆಳೆದರು.

78 ವಯಸ್ಸಿನ ಹಿರಿಯ ಯೋಧ ಚಂದ್‌ಪೂರಿ ದೇಶದ ಎರಡನೇ ಉನ್ನತ ಶೌರ್ಯ ಪ್ರಶಸ್ತಿ ಮಹಾವೀರ ಚಕ್ರವನ್ನು ಸ್ವೀಕರಿಸಿದ್ದರು. ಇಂದು ಬೆಳಗ್ಗೆ 8:30ರ ಸುಮಾರಿಗೆ ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಚಂದ್‌ಪೂರಿ ಅವರ ಇನ್ನೊಬ್ಬ ಪುತ್ರ ಜರ್ಮನಿಯಿಂದ ವಾಪಸಾದ ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಪುತ್ರ ಹರ್ದೀಪ್ ಸಿಂಗ್ ಚಂದ್‌ಪೂರಿ ಹೇಳಿದ್ದಾರೆ.

1971ರ ಭಾರತ-ಪಾಕ್ ಯುದ್ದದಲ್ಲಿ ಚಂದ್‌ಪೂರಿ ಅವರು ತೋರಿದ್ದ ಸಾಹಸ ಹಾಗೂ ಬದ್ಧತೆಯಿಂದ ಹೆಸರುವಾಸಿಯಾಗಿದ್ದರು. ಇವರ ಕುರಿತು ನಿರ್ಮಾಪಕ ಜೆಪಿ ದತ್ತ ‘ಬಾರ್ಡರ್’ ಎಂಬ ಹಿಂದಿ ಚಿತ್ರವನ್ನು ನಿರ್ಮಿಸಿದ್ದು, ಸನ್ನಿ ಡಿಯೊಲ್ ಅವರು ಬ್ರಿಗೇಡಿಯರ್ ಚಂದ್‌ಪೂರಿ ಪಾತ್ರವನ್ನು ನಿಭಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News