ನೆಹರು-ಗಾಂಧಿ ಕುಟುಂಬದ ಹೊರಗಿನ 15 ಕಾಂಗ್ರೆಸ್ ಅಧ್ಯಕ್ಷರುಗಳ ಹೆಸರು ಪಟ್ಟಿ ಮಾಡಿದ ಚಿದಂಬರಂ

Update: 2018-11-17 08:54 GMT

ಹೊಸದಿಲ್ಲಿ, ನ. 17: ಐದು ವರ್ಷಗಳ ಅವಧಿಗೆ ಗಾಂಧಿ ಕುಟುಂಬದ ಹೊರಗಿನವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿಸಿ ಎಂದು ಸವಾಲು ಹಾಕಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿರುವ ಮಾಜಿ ವಿತ್ತ ಸಚಿವ ಪಿ. ಚಿದಂಬರಂ, ನೆಹರೂ-ಗಾಂಧಿ ಕುಟುಂಬದ ಹೊರಗಿನವರಾಗಿರುವ 15 ಕಾಂಗ್ರೆಸ್ ಅಧ್ಯಕ್ಷರುಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಚಿದಂಬರಂ ''ಪ್ರಧಾನಿ ಮೋದಿಯ ನೆನಪು ತಾಜಾಗೊಳಿಸಲು, 1947ರಿಂದ ಸೇವೆ ಸಲ್ಲಿಸಿದ್ದ ಕಾಂಗ್ರೆಸ್ ಅಧ್ಯಕ್ಷರ ಪೈಕಿ ಆಚಾರ್ಯ ಕೃಪಲಾನಿ, ಪಟ್ಟಾಭಿ ಸೀತಾರಾಮಯ್ಯ, ಪುರುಷೋತ್ತಮದಾಸ್ ಟಂಡನ್, ಯು.ಎನ್ ಧೇಬರ್, ಸಂಜೀವ ರೆಡ್ಡಿ, ಸಂಜೀವಯ್ಯ, ಕಾಮರಾಜ್, ನಿಜಲಿಂಗಪ್ಪ, ಸಿ.ಸುಬ್ರಹ್ಮಣ್ಯನ್, ಜಗಜೀವನ್ ರಾಮ್, ಶಂಕರ್ ದಯಾಳ್ ಶರ್ಮ, ಡಿ.ಕೆ. ಬರುವ, ಬ್ರಹ್ಮಾನಂದ ರೆಡ್ಡಿ, ಪಿ.ವಿ. ನರಸಿಂಹ ರಾವ್ ಮತ್ತು ಸೀತಾರಾಂ ಕೇಸರಿ.

'ಯಾರು ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆಂಬ ಕಾಳಜಿ ಪ್ರಧಾನಿ ಮೋದಿಗಿರುವುದಕ್ಕೆ ಧನ್ಯವಾದಗಳು. ಅದರ ಬಗ್ಗೆ ಮಾತನಾಡಲು ಅವರು ಸಾಕಷ್ಟು ಸಮಯ ಮೀಸಲಿರಿಸುತ್ತಾರೆ. ಅಂತೆಯೇ ಅವರು ಅಮಾನ್ಯೀಕರಣ, ಜಿಎಸ್‍ಟಿ, ರಫೇಲ್, ಸಿಬಿಐ, ಆರ್ ಬಿಐ, ನಿರುದ್ಯೋಗ, ಗುಂಪು ಥಳಿತ ಹಾಗೂ ರೈತರ ಆತ್ಮಹತ್ಯೆಗಳ ಬಗ್ಗೆ ಕೂಡ ಮಾತನಾಡುವರೇ ?'' ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News