ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿ: ಪದಕ ಖಚಿತಪಡಿಸಿದ ಸೇನ್

Update: 2018-11-17 09:30 GMT

ಹೊಸದಿಲ್ಲಿ, ನ.17: ಕೆನಡಾದಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಭಾರತದ ಯುವ ಶಟ್ಲರ್ ಲಕ್ಷ ಸೇನ್ ಚೊಚ್ಚಲ ಪದಕವನ್ನು ಖಾತ್ರಿಪಡಿಸಿದ್ದಾರೆ.

ಇಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 17ರ ಹರೆಯದ ಲಕ್ಷ ಸೇನ್ ಶ್ರೇಯಾಂಕರಹಿತ ಮಲೇಶ್ಯಾದ ಅದಿಲಿ ಶೊಲೆ ಅಲಿ ಸಾಡಿಕಿನ್‌ರನ್ನು 21-8, 21-18 ನೇರ ಗೇಮ್‌ಗಳ ಅಂತರದಿಂದ ಸುಲಭವಾಗಿ ಮಣಿಸಿದರು. ಈ ಗೆಲುವಿನೊಂದಿಗೆ ಸೆಮಿ ಫೈನಲ್‌ಗೆ ತಲುಪಿರುವ ಸೇನ್ ಕನಿಷ್ಠ ಕಂಚಿನ ಪದಕವನ್ನು ದೃಢಪಡಿಸಿದ್ದಾರೆ.

ಸೇನ್ ಸೆಮಿ ಫೈನಲ್‌ನಲ್ಲಿ ಅಗ್ರ ಶ್ರೆಯಾಂಕದ ಹಾಗೂ ಹಾಲಿ ಚಾಂಪಿಯನ್ ಕುಲವುಟ್ ವಿಟಿಸರ್ನ್‌ರನ್ನು ಎದುರಸಲಿದ್ದಾರೆ. ಇತ್ತೀಚೆಗೆ ನಡೆದಿದ್ದ ಏಶ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಸೇನ್ ಅವರು ಥಾಯ್ಲೆಂಡ್ ಆಟಗಾರ ವಿಟಿಡ್‌ಸರ್ನ್‌ರನ್ನು ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News