ಸೌದಿ ಅರೇಬಿಯಾ: ಐಎಸ್ಎಫ್, ಲುಲು ಹೈಪರ್ ಮಾರ್ಕೆಟ್ ಸಹಯೋಗದಲ್ಲಿ ಮಕ್ಕಳ ದಿನಾಚರಣೆ

Update: 2018-11-17 10:48 GMT

ರಿಯಾದ್, ನ. 17: "ನವೆಂಬರ್ 14 ಕೇವಲ ಮಕ್ಕಳ ದಿನಾಚರಣೆಗೆ ಸೀಮಿತವಾದ ದಿನವಲ್ಲ ಬದಲಾಗಿ ಅದು ಜವಾಹರ್ ಲಾಲ್ ನೆಹರು ಅವರು ನಮ್ಮ ದೇಶಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿ ಅವರು ಕಂಡ ಕನಸಿನ ಹಾದಿಯಲ್ಲಿ ಇಂದಿನ ಪೀಳಿಗೆಯನ್ನು ಬೆಳೆಸುವೆವೆಂದು ಪ್ರತಿಜ್ಞೆಗೈಯುವ ದಿನವೂ ಕೂಡ ಆಗಿದೆ" ಎಂದು ಲುಲು ಹೈಪರ್ ಮಾರ್ಕೆಟ್ ಜುಬೈಲ್ ಹಾಗು ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಾಜ್ಯ, ಪೂರ್ವ ಪ್ರಾಂತ್ಯ, ಸೌದಿ ಅರೇಬಿಯಾ ಇದರ ಜಂಟಿ ಸಹಯೋಗದಲ್ಲಿ ಇತ್ತೀಚೆಗೆ ನಡೆದ "ಆರ್ಟ್ ಬೀಟ್-2018" ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಫಿರೋಝ್ ಹೇಳಿದರು.

ಅಂದು ಸಂಜೆ 7:30ಕ್ಕೆ ಆರಂಭವಾದ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವಿಶೇಷ ಸ್ಪರ್ಧೆಗಳನ್ನು ಏರ್ಪಪಡಿಸಲಾಗಿತ್ತು. ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ನಡೆದ ಬಣ್ಣಗಾರಿಕೆ ಮತ್ತು ಛದ್ಮವೇಷ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಂಡರು. ಜೂನಿಯರ್ ವಿಭಾಗದ ಬಣ್ಣಗಾರಿಕೆ ಸ್ಪರ್ಧೆಯಲ್ಲಿ ಹಬೀಬ ಪ್ರಥಮ ಸ್ಥಾನ, ಶಿಝ ಫಾತಿಮಾ ದ್ವಿತೀಯ ಸ್ಥಾನ ಪಡೆದರು. ಸೀನಿಯರ್ ವಿಭಾಗದ ಬಣ್ಣಗಾರಿಕೆ ಸ್ಪರ್ಧೆಯಲ್ಲಿ ಆಲಿಯಾ ರಹೀಮ ಪ್ರಥಮ ಸ್ಥಾನ, ನಹಾ ನವಾಝ್ ದ್ವಿತೀಯ ಸ್ಥಾನ ಪಡೆದರು. ನಂತರ ನಡೆದ ಜೂನಿಯರ್ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ಉಮರ್ ಹಂಝ ಪ್ರಥಮ ಸ್ಥಾನ, ಶಿಝ ಫಾತಿಮಾ ದ್ವಿತೀಯ ಸ್ಥಾನ ಪಡೆದರು. ಸೀನಿಯರ್ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ಅಲೀಝ ಆದಿಲ್ ಪ್ರಥಮ ಸ್ಥಾನ, ಅರ್ಶ್ ದ್ವಿತೀಯ ಸ್ಥಾನ ಪಡೆದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲುಲು ಹೈಪರ್ ಮಾರ್ಕೆಟ್ ಜುಬೈಲ್ ಇದರ ಸೆಕ್ಯೂರಿಟಿ ಮ್ಯಾನೇಜರ್ ಅಬ್ದುಲ್ಲಾ ಅಲ್ ಹಾಜ್ರೀ, ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಫಿರೋಝ್, ಇಂಡಿಯಾ ಫ್ರೆಟರ್ನಿಟಿ ಫೋರಂ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಾಜಿದ್ ಆಗಮಿಸಿದ್ದರು.

ತೀರ್ಪುಗಾರರಾಗಿ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಕೆಜಿ ವಿಭಾಗದ ಪ್ರಾಧ್ಯಾಪಕರುಗಳಾದ ಆಶಾ, ಆಸಿಯಾ  ಹಾಗೂ ಐಎಸ್ಎಫ್ ದಮಾಮಿನ ಶಬೀರ್ ಇವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಇಂಡಿಯನ್ ಸೋಷಿಯಲ್ ಫೋರಂ ಉಡುಪಿ  ಬ್ಲಾಕ್ ಸದಸ್ಯ ಸಲೀಂ ಉಡುಪಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News