‘ಇಂಡಿಗೊ’ ವಿಮಾನಯಾನ ಸಿಬ್ಬಂದಿ ಆತ್ಮಹತ್ಯೆ

Update: 2018-11-17 13:58 GMT

ಹೊಸದಿಲ್ಲಿ, ನ.17: ಅಸ್ಸಾಂ ಮೂಲದ ಮಹಿಳೆ, ಇಂಡಿಗೊ ವಿಮಾನಯಾನ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ 35 ವರ್ಷದ ಮೌಸಮಿ ಗೌತಮ್ ಮೃತದೇಹ ಆಕೆ ತಂಗಿದ್ದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಡಿಗೋ ಸಂಸ್ಥೆಯ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೌಸಮಿ ಮೂರು ದಿನದ ತರಬೇತಿ ಕಾರ್ಯಕ್ರಮಕ್ಕಾಗಿ ಆಗಮಿಸಿದವರು ದಿಲ್ಲಿಯ ಗುರುಗ್ರಾಮದಲ್ಲಿರುವ ಅತಿಥಿಗೃಹದಲ್ಲಿ ತಂಗಿದ್ದರು. ತರಬೇತಿ ಮುಗಿಸಿ ಶುಕ್ರವಾರ ವಾಪಾಸು ತೆರಳುವವರಿದ್ದರು. ಆದರೆ ಕೋಣೆಗೆ ತೆರಳಿದ ಆಕೆ ಎಷ್ಟು ಹೊತ್ತಾದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಅತಿಥಿಗೃಹದ ಸಿಬ್ಬಂದಿಗಳು ಕೋಣೆಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ಸಿಬ್ಬಂದಿಗಳು ಕೋಣೆಯ ಬಾಗಿಲನ್ನು ಮುರಿದು ಒಳಹೊಕ್ಕಾಗ ಕೋಣೆಯ ಸೀಲಿಂಗ್ ಫ್ಯಾನ್‌ಗೆ ಶಾಲ್‌ನಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ವೌಸಮಿ ವಿವಾಹಿತೆಯಾಗಿದ್ದು 8 ವರ್ಷದ ಮಗಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News