ಭ್ರಷ್ಟಾಚಾರ ವಿಷಯದಲ್ಲಿ ರಾಜ್ಯಗಳು ಪರಮಾಧಿಕಾರ ಹೊಂದಿಲ್ಲ: ಜೇಟ್ಲಿ

Update: 2018-11-17 14:47 GMT

ಭೋಪಾಲ,ನ.17: ತಮ್ಮ ರಾಜ್ಯಗಳಿಗೆ ಸಿಬಿಐ ಅಧಿಕಾರಿಗಳ ಪ್ರವೇಶವನ್ನು ನಿಷೇಧಿಸಿರುವ ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ನಡೆಗೆ ಶನಿವಾರ ಇಲ್ಲಿ ತಿರುಗೇಟು ನೀಡಿದ ಕೇಂದ್ರ ವಿತ್ತ ಸಚಿವ ಅರುಣ ಜೇಟ್ಲಿ ಅವರು,ಭ್ರಷ್ಟಾಚಾರದ ವಿಷಯದಲ್ಲಿ ಯಾವುದೇ ರಾಜ್ಯವು ಪರಮಾಧಿಕಾರವನ್ನು ಹೊಂದಿಲ್ಲ. ತಮ್ಮ ಬಳಿ ಬಚ್ಚಿಡುವಂತಹ ಸಾಕಷ್ಟು ಸರಕುಗಳಿದ್ದವರು ಮಾತ್ರ ರಾಜ್ಯದಲ್ಲಿ ಸಿಬಿಐಗೆ ಪ್ರವೇಶವನ್ನು ನಿರಾಕರಿಸುವ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಆಂಧ್ರಪ್ರದೇಶ ಸರಕಾರವು ಈ ಕ್ರಮವನ್ನು ತೆಗೆದುಕೊಳ್ಳಲು ಯಾವುದೇ ನಿರ್ದಿಷ್ಟ ಪ್ರಕರಣ ಕಾರಣವಾಗಿರುವ ಸಾಧ್ಯತೆಯಿದ್ದಂತಿಲ್ಲ,ಅದು ಭವಿಷ್ಯದಲ್ಲಿಯ ಸಂಭಾವ್ಯತೆಗಾಗಿ ಹೆದರಿಕೊಂಡಿರುವಂತಿದೆ ಎಂದರು. ಪ.ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕತ್ವವು ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದ ಅವರು,ಸಿಬಿಐಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ ಮಾತ್ರಕ್ಕೆ ಶಾರದಾ ಮತ್ತು ನಾರದ ಹಗರಣಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News